ಬಜಾಜ್ ಪಲ್ಸರ್ ಸರಣಿಯ ಹೊಸ ಬೈಕ್ ಬಿಡುಗಡೆಗೆ ಕಾಯುತ್ತಿದ್ದ ಬೈಕ್ ಪ್ರಿಯರ ಕುತೂಹಲ ತಣಿಸುವ ಸುದ್ದಿ ಕೊನೆಗೂ ಬಂದಿದೆ.
ಹೊಸ ತಲೆಮಾರಿನ ಪಲ್ಸರ್ ಬೈಕ್ ಅಕ್ಟೋಬರ್ 28ರಂದು ಬಿಡುಗಡೆಯಾಗಲಿದೆ ಎಂದು ಮಾಧ್ಯಮಗಳ ವರದಿಗಳು ತಿಳಿಸಿವೆ. ಈ ಹೊಸ ಬೈಕ್‌ನ ಹೆಸರನ್ನು ಬಜಾಜ್ ಇನ್ನೂ ಬಹಿರಂಗ ಮಾಡಿಲ್ಲ. ಈ ಬೈಕ್‌ನ ಹೆಸರು ಬಜಾಜ್ ಪಲ್ಸರ್ 250 ಎಂದು ಇರಲಿದೆ ಎಂದು ಮಾಧ್ಯಮಗಳ ವರದಿಗಳು ತಿಳಿಸುತ್ತಿವೆ.
ಗುಡ್ ನ್ಯೂಸ್: PUC ಪಾಸಾದವರಿಗೆ 20 ಸಾವಿರ, ಪದವೀಧರರಿಗೆ 25, ಪಿಜಿ ಆದವರಿಗೆ 30 ಸಾವಿರ ರೂ. ಪ್ರೋತ್ಸಾಹಧನ
ಎನ್‌ಎಸ್250, ಆರ್‌ಎಸ್250 ಹಾಗೂ 250ಎಫ್ ಎಂಬ ಮುರು ಅವತರಣಿಕೆಗಳಲ್ಲಿ ಈ ಬೈಕ್ ಮಾರುಕಟ್ಟೆಗೆ ಆಗಮಿಸಲಿದೆ ಎಂದು ಈ ಹಿಂದೆ ವರದಿಯಾಗಿತ್ತು.
ಕೋವಿಡ್ ಸಾಂಕ್ರಾಮಿಕದ ಕಾರಣದ ಪಲ್ಸರ್ ನ ಹೊಸ ಬೈಕ್ ಬಿಡುಗಡೆಯನ್ನು ತಿಂಗಳುಗಳ ಮಟ್ಟಿಗೆ ಮುಂದೂಡಲಾಗಿತ್ತು.
ಉದ್ಯೋಗದ ನಿರೀಕ್ಷೆಯಲ್ಲಿದ್ದ ಪದವೀಧರರಿಗೆ ಗುಡ್ ನ್ಯೂಸ್: 45 ಸಾವಿರ ಫ್ರೆಷರ್ ಗಳ ನೇಮಕಾತಿಗೆ ಮುಂದಾದ ಇನ್ಫೋಸಿಸ್
250 ಸಿಸಿ ಸಿಂಗಲ್ ಸಿಲಿಂಡರ್ ಆಯಿಲ್ ಕೂಲ್ಡ್ ಇಂಜಿನ್‌ನೊಂದಿಗೆ ಬರಲಿರುವ ಈ ಬೈಕ್‌ನಲ್ಲಿ ಆರು ಗೇರ್‌ನ ಬಾಕ್ಸ್ ಇರಲಿದೆ. ಎರಡು ಚಕ್ರಗಳಿಗೆ ಡಿಸ್ಕ್ ಬ್ರೇಕ್ ಗಳು, ಎಬಿಎಸ್ ಹಾಗೂ ಸಂಪೂರ್ಣ ಡಿಜಿಟಲ್ ಕನ್ಸೋಲ್ ಮತ್ತು ಸ್ಮಾರ್ಟ್‌ಫೋನ್ ಸಂಪರ್ಕವಿರಲಿದೆ.
ಕೋವಿಡ್ ತಗ್ಗಿದ ಬಳಿಕ ಆಟೋಮೊಬೈಲ್ ಕ್ಷೇತ್ರ ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದು, ಹೊಸ ವಾಹನಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಈ ವಾಹನಕ್ಕೆ ಜನರು ಯಾವ ರೀತಿ ಸ್ಪಂದಿಸುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.