ಬಜಾಜ್ ಪಲ್ಸರ್ 250 ಅಭಿಮಾನಿಗಳಿಗೆ ಖುಷಿ ಸುದ್ದಿಯೊಂದಿದೆ. ಬಜಾಜ್ ಆಟೋ ಕಳೆದ ತಿಂಗಳು ಭಾರತದಲ್ಲಿ ತನ್ನ ಬಜಾಜ್ ಪಲ್ಸರ್ 250 ಸರಣಿಯನ್ನು ಬಿಡುಗಡೆ ಮಾಡಿತ್ತು. ಈಗ ಬಜಾಜ್ ಪಲ್ಸರ್ 250 ಮಾರಾಟ ಶುರುವಾಗಿದೆ. ಬಜಾಜ್ ಪಲ್ಸರ್ ಎಫ್ 250 ಮೊದಲ ಮಾರಾಟ ನವೆಂಬರ್ 15ರಂದು ನಡೆದಿದೆ. ಪುಣೆಯ ಚಿಂಚ್‌ವಾಡ್‌ನಲ್ಲಿರುವ ಶೌರ್ಯ ಬಜಾಜ್ ಶೋರೂಮ್ ನಲ್ಲಿ ಮೊದಲ ಡೆಲಿವರಿ ನಡೆದಿದೆ.
ಬಜಾಜ್ ಪಲ್ಸರ್ ಎಫ್250 ಮತ್ತು ಬಜಾಜ್ ಪಲ್ಸರ್ ಎನ್250 ಬೈಕ್ ಎರಡು ರೂಪಾಂತರಗಳೊಂದಿಗೆ ಬಂದಿದೆ. ಇದನ್ನು ಬಜಾಜ್ ಆಟೋ ಸ್ಪೋರ್ಟ್ಸ್ ಟೆಕ್ ವಿನ್ಯಾಸದೊಂದಿಗೆ ಬಿಡುಗಡೆ ಮಾಡಲಾಗಿದೆ. ಅಸಿಸ್ಟ್ ಮತ್ತು ಸ್ಲಿಪ್ಪರ್ ಕ್ಲಚ್, ಪ್ರೊಜೆಕ್ಟರ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, ಗೇರ್ ಇಂಡಿಕೇಟರ್ ಮತ್ತು ಮೊಬೈಲ್ ಚಾರ್ಜಿಂಗ್‌ನಂತಹ ವೈಶಿಷ್ಟ್ಯಗಳು ಇದ್ರಲ್ಲಿವೆ. ಟೆಕ್ನೋ ಗ್ರೇ ಮತ್ತು ರೇಸಿಂಗ್ ರೆಡ್ ಬಣ್ಣದಲ್ಲಿ ಬೈಕ್ ಲಭ್ಯವಿದೆ.
ಬಜಾಜ್ ಪಲ್ಸರ್ 250, 248.07 cc ಸಿಂಗಲ್ ಸಿಲಿಂಡರ್, 2 ವಾಲ್ವ್, 4-ಸ್ಟ್ರೋಕ್, ಆಯಿಲ್ ಕೂಲ್ಡ್ ಎಫ್ ಐ ಎಂಜಿನ್ ಹೊಂದಿದೆ. ಇದರ ಎಂಜಿನ್ 8750 rpm ನಲ್ಲಿ 24.5 PS ನ ಗರಿಷ್ಠ ಶಕ್ತಿಯನ್ನು ಮತ್ತು 6500 rpm ನಲ್ಲಿ 21.5 Nm ನ ಗರಿಷ್ಠ ಟಾರ್ಕ್ ಉತ್ಪಾದಿಸುತ್ತದೆ.
ಇದರ ಸೀಟ್ ಎತ್ತರ 795 ಮಿಮೀ ಇದ್ದು, 14 ಲೀಟರ್ ಸಾಮರ್ಥ್ಯದ ಪೆಟ್ರೋಲ್ ಟ್ಯಾಂಕ್ ಹೊಂದಿದೆ. ಬಜಾಜ್ ಪಲ್ಸರ್ F250 ತೂಕ 164 ಕೆಜಿ. ಬಜಾಜ್ ಪಲ್ಸರ್ N250 ನ ತೂಕ 162 ಕೆಜಿ. ಇದರ ಮುಂಭಾಗವು 37 ಎಂಎಂ ಟೆಲಿಸ್ಕೋಪಿಕ್ ಸಸ್ಪೆನ್ಷನ್ ಹೊಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಪಲ್ಸರ್ ಎಫ್250 ಬೆಲೆ 1.40 ಲಕ್ಷ ರೂಪಾಯಿ. ಪಲ್ಸರ್ ಎನ್250 ಬೆಲೆ 1.38 ಲಕ್ಷ ರೂಪಾಯಿ.