
ಕೋಲಾರ: ಸಾಲ ಮರು ಪಾವತಿ ಮಾಡದ್ದಕ್ಕೆ ಕಿರುಕುಳ ನೀಡಿ ತಾನು ಪೊಲೀಸ್ ಅಧಿಕಾರಿ ಎಂದು ಹೇಳಿಕೊಂಡು ಬೆದರಿಕೆ ಹಾಕುತ್ತಿದ್ದ ಬಜಾಜ್ ಫೈನಾನ್ಸ್ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕೋಲಾರ ಜಿಲ್ಲೆಯ ಮಾಲೂರು ಠಾಣೆಯ ಪೊಲೀಸರು ಆರೋಪಿ ಪವನ್ ನನ್ನು ಬಂಧಿಸಿದ್ದಾರೆ. ಬಂಗಾರಪೇಟೆಯ ಅತ್ತಿಗಿರಿಕೊಪ್ಪ ಗ್ರಾಮದ ನಿವಾಸಿಯಾಗಿದ್ದ ಪವನ್ ಬೈಜಾಜ್ ಫೈನಾನ್ಸ್ ಸಿಬ್ಬಂದಿಯಾಗಿದ್ದ.
ಮಾಲೂರು ಮೂಲದ ಹರೀಶ್ ಎಂಬುವವರು ಬಜಾಜ್ ಫೈನಾನ್ಸ್ ನಿಂದ 1 ಲಕ್ಷ ರೂಪಾಯಿ ಸಾಲ ಪಡೆದಿದ್ದರು. ಇದಕ್ಕೆ ಪವನ್ ಕರೆ ಮಾಡಿ ಹಣ ವಾಪಾಸ್ ನೀಡುವಂತೆ ಕರೆ ಮಾಡಿ ಅವಾಚ್ಯವಾಗಿ ನಿಂದಿಸುತ್ತಿದ್ದ. ಅಲ್ಲದೇ ತಾನು ಪೊಲೀಸ್ ಎಂದು ಹೇಳಿ ಬೆದರಿಕೆ ಹಾಕಿ ಕಿರುಕುಳ ನೀಡುತಿದ್ದ. ಬೆದರಿಕೆ ಹಾಕುತ್ತಿದ್ದ ಅಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಘಟನೆ ಬೆನ್ನಲ್ಲೇ ಮಾಲೂರು ಠಾಣೆ ಪೊಲೀಸರು ಆರೋಪಿ ಪವನ್ ನನ್ನು ಬಂಧಿಸಿದ್ದಾರೆ.