alex Certify ಮಹಿಳೆಯರಿಗೆ ಹೇಳಿ ಮಾಡಿಸಿದಂತಿವೆ ಈ ಎಲೆಕ್ಟ್ರಿಕ್‌ ಸ್ಕೂಟರ್ಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಿಳೆಯರಿಗೆ ಹೇಳಿ ಮಾಡಿಸಿದಂತಿವೆ ಈ ಎಲೆಕ್ಟ್ರಿಕ್‌ ಸ್ಕೂಟರ್ಸ್‌

Ola Electric S1 X + Price, Images, Mileage, Specs & Features

 

ನಗರಗಳಲ್ಲಿ ಜನಸಂದಣಿ ಹೆಚ್ಚುತ್ತಿರುವುದರಿಂದ ಬಹುತೇಕ ಜನರು ಓಡಾಟಕ್ಕಾಗಿ ದ್ವಿಚಕ್ರ ವಾಹನಗಳಿಗೆ ಆದ್ಯತೆ ನೀಡುತ್ತಿದ್ದಾರೆ. ಪೆಟ್ರೋಲ್‌ ಬೆಲೆ ಕೂಡ ಗಗನಕ್ಕೇರಿದ್ದರಿಂದ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಎಲೆಕ್ಟ್ರಿಕ್‌ ಸ್ಕೂಟರ್‌ಗಳು ಮಹಿಳೆಯರಿಗೂ ಫೇವರಿಟ್‌. ನಗರದಲ್ಲಿ ದೈನಂದಿನ ಕೆಲಸಕ್ಕೆ ಇವು ಹೇಳಿ ಮಾಡಿಸಿದಂತಿರುತ್ತವೆ.

ಬಜಾಜ್ ಚೇತಕ್ 2901

ಬಜಾಜ್ ಚೇತಕ್ 2901 ಕಂಪನಿಯ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್. ಕಂಪನಿಯು ಈ ಸ್ಕೂಟರ್‌ನಲ್ಲಿ 2.88 kWh ಬ್ಯಾಟರಿ ಪ್ಯಾಕ್ ಅನ್ನು ನೀಡಿದೆ. ಒಮ್ಮೆ ಚಾರ್ಜ್‌ ಮಾಡಿದ್ರೆ ಈ ಸ್ಕೂಟರ್ 123 ಕಿಮೀ ಓಡಬಲ್ಲದು. ಈ ಸ್ಕೂಟರ್‌ನ ಗರಿಷ್ಠ ವೇಗ 63 ಕಿಮೀ. ಇದರಲ್ಲಿ ಡಿಜಿಟಲ್ ಇನ್‌ಸ್ಟ್ರುಮೆಂಟ್‌ ಕ್ಲಸ್ಟರ್‌ನೊಂದಿಗೆ ಅನೇಕ ಉತ್ತಮ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್‌ನ ಎಕ್ಸ್ ಶೋ ರೂಂ ಬೆಲೆ 95,998 ರೂಪಾಯಿ. ಇದು ಮಾರುಕಟ್ಟೆಯಲ್ಲಿ ಓಲಾ ಸ್ಕೂಟರ್‌ಗಳಿಗೆ ನೇರ ಪೈಪೋಟಿ ಒಡ್ಡುತ್ತದೆ.

ಓಲಾ ಎಸ್1

ಓಲಾ ಎಲೆಕ್ಟ್ರಿಕ್ ಕಡಿಮೆ ಸಮಯದಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ತನ್ನದೇ ಆದ ಗುರುತನ್ನು ಸೃಷ್ಟಿಸಿದೆ. ಓಲಾ ಎಲೆಕ್ಟ್ರಿಕ್ ಸ್ಕೂಟರ್‌ಗಳು ಬಹಳ ಜನಪ್ರಿಯವಾಗಿವೆ. Ola S1X ಅನ್ನು ಕಂಪನಿಯ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ ಎಂದು ಪರಿಗಣಿಸಲಾಗಿದೆ. ಈ ಸ್ಕೂಟರ್ 2 ಕಿಲೋವ್ಯಾಟ್ ಬ್ಯಾಟರಿ ಪ್ಯಾಕ್ ಹೊಂದಿದೆ. ಈ ಸ್ಕೂಟರ್ ಒಂದು ಸಂಪೂರ್ಣ ಚಾರ್ಜ್‌ನಲ್ಲಿ ಸುಮಾರು 91 ಕಿಮೀ ವ್ಯಾಪ್ತಿಯನ್ನು ಒದಗಿಸುತ್ತದೆ.

ಈ ಸ್ಕೂಟರ್‌ನ 3 kWh ಬ್ಯಾಟರಿ ರೂಪಾಂತರವು 151 ಕಿಮೀ ವ್ಯಾಪ್ತಿಯನ್ನು ನೀಡುವ ಸಾಮರ್ಥ್ಯ ಹೊಂದಿದೆ. ಇದು ಗಂಟೆಗೆ 90 ಕಿಮೀ ವೇಗದಲ್ಲಿ ಓಡಬಲ್ಲದು. Ola S1X 2 KW ರೂಪಾಂತರದ ಎಕ್ಸ್ ಶೋ ರೂಂ ಬೆಲೆ 74,999 ರೂಪಾಯಿ. Ola S1X ನ 3 KW ರೂಪಾಂತರದ ಎಕ್ಸ್ ಶೋರೂಂ ಬೆಲೆ 84,999 ರೂಪಾಯಿ.

ಹೀರೋ ವಿದಾ

ಹೀರೋ ಇತ್ತೀಚೆಗೆ ತನ್ನ ಹೊಸ ಎಲೆಕ್ಟ್ರಿಕ್ ಸ್ಕೂಟರ್ Hero Vida 1 ಅನ್ನು Vida ಬ್ರ್ಯಾಂಡ್‌ನಿಂದ ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ದಿನನಿತ್ಯದ ಕಾರ್ಯಗಳಿಗೆ ಇದು ಅತ್ಯುತ್ತಮ ಆಯ್ಕೆಯಾಗಿದೆ. ವಿ1 ಪ್ಲಸ್ ಮತ್ತು ವಿ1 ಪ್ರೊ ಎಂಬ ಎರಡು ರೂಪಾಂತರಗಳು ಇದರಲ್ಲಿ ಲಭ್ಯವಿವೆ. ಹೀರೋ ವಿದಾ V1 ಪ್ಲಸ್ ರೂಪಾಂತರದಲ್ಲಿ, ಕಂಪನಿಯು 3.44 kWh ಬ್ಯಾಟರಿ ಪ್ಯಾಕ್ ಅನ್ನು ಒದಗಿಸಿದೆ. ಇದು ಒಂದು ಸಂಪೂರ್ಣ ಚಾರ್ಜ್‌ನಲ್ಲಿ 100 ಕಿಮೀ ವ್ಯಾಪ್ತಿಯನ್ನು ಒದಗಿಸುತ್ತದೆ.

ಆದರೆ Vida V1 Pro ವೇರಿಯಂಟ್ ಸ್ಕೂಟರ್ 3.94 kWh ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಒಮ್ಮೆ ಸಂಪೂರ್ಣವಾಗಿ ಚಾರ್ಜ್ ಮಾಡಿದರೆ 110 ಕಿಮೀ ವ್ಯಾಪ್ತಿಯನ್ನು ನೀಡುತ್ತದೆ. ಈ ಎರಡೂ ಎಲೆಕ್ಟ್ರಿಕ್ ಸ್ಕೂಟರ್‌ಗಳು ಗಂಟೆಗೆ 80 ಕಿ.ಮೀ ಓಡಬಲ್ಲವು. Hero Vida V1 ಎಲೆಕ್ಟ್ರಿಕ್ ಸ್ಕೂಟರ್‌ನ ಎಕ್ಸ್ ಶೋ ರೂಂ ಬೆಲೆ 1.20 ಲಕ್ಷದಿಂದ ಪ್ರಾರಂಭವಾಗಿ 1.50 ಲಕ್ಷದವರೆಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...