
ಬೆಳಗಾವಿ: ಪಹಣಿ ಪತ್ರ ಮಾಡಿಕೊಡಲು ಲಂಚಕ್ಕೆ ಕೈಯೊಡ್ದಿದ್ದ ಎಸ್ ಡಿಸಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲದಲ್ಲಿ ನಡೆದಿದೆ.
ಮಂಜುನಾಥ್ ಲೋಕಾಯುಕ್ತ ಬಲೆಗೆ ಬಿದ್ದ ಬೈಲಹೊಂಗಲ ಉಪವಿಭಾಗ ಕಚೇರಿಯ ಎಸ್ ಡಿಸಿ. ರಾಮದುರ್ಗ ತಾಲೂಕಿನ ರವಿ ಎಂಬುವವರಿಗೆ ಪಹಣಿ ಪತ್ರ ಮಾಡಿಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
60 ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದಾಗ ಖಚಿತ ಮಾಹಿತಿ ಮೇರೆಗೆ ಲೋಕಾಯುಕ್ತ ಎಸ್ ಪಿ ಹಣಮತರಾಯ ನೇತೃತ್ವದಲ್ಲಿ ದಾಳಿ ನಡೆಸಲಾಗಿದ್ದು, ಮಂಜುನಾಥ್ ಅವರನ್ನು ವಶಕ್ಕೆ ಪಡೆಯಲಾಗಿದೆ.