
ಮೈಸೂರು: ಮೈಸೂರಿನಲ್ಲಿ ವಿವಾದಿತ ಪೋಸ್ಟ್ ನಿಂದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸತೀಶ್ ಅಲಿಯಾಸ್ ಪಾಂಡುರಂಗ್ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ.
ಮೈಸೂರಿನ 2ನೇ ಸಿವಿಲ್ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ಆರೋಪಿ ಸತೀಶ್ ಹಾಕಿದ್ದ ವಿವಾದಿತ ಪೋಸ್ಟ್ ಗೆ ಸಂಬಂಧಿಸಿದಂತೆ ಫೆಬ್ರವರಿ 10ರಂದು ಉದಯಗಿರಿ ಠಾಣೆಯಲ್ಲಿ ಗಲಾಟೆ ನಡೆದಿತ್ತು.
ಸಾಮಾಜಿಕ ಜಾಲತಾಣದಲ್ಲಿ ಸತೀಶ್ ಪೋಸ್ಟ್ ಹಾಕಿದ್ದು ವಿವಾದಕ್ಕೆ ಕಾರಣವಾಗಿತ್ತು. ಉದಯಗಿರಿ ಠಾಣೆಯ ಮೇಲೆ ಉದ್ರಿಕ್ತರ ಗುಂಪು ದಾಳಿ ನಡೆಸಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವರನ್ನು ಬಂಧಿಸಲಾಗಿತ್ತು. ಪೋಸ್ಟ್ ಹಾಕಿದ್ದ ಆರೋಪಿ ಸತೀಶ್ ಗೆ ಜಾಮೀನು ದೊರೆತಿದೆ. ಅವರ ಪರ ವಕೀಲ ಹಾ.ಮ. ಭಾಸ್ಕರ್ ವಾದ ಮಂಡಿಸಿದ್ದರು.