ವಿಮಾನದಲ್ಲಿ ಪ್ರಯಾಣಿಸುವವರು ತಮ್ಮ ಬ್ಯಾಗೇಜ್ ಗಳ ಬಗ್ಗೆ ತುಂಬಾ ಜಾಗರೂಕರಾಗಿರಬೇಕು. ಇಲ್ಲದಿದ್ರೆ ಅವ್ರ ಬ್ಯಾಗ್ ಅಥವಾ ಸೂಟ್ ಕೇಸ್ ಪೀಸ್ ಪೀಸ್ ಆಗಿಬಿಡಬಹುದು. ಅಥವಾ ಆ ಬ್ಯಾಗ್ ಅಥವಾ ಸೂಟ್ ಕೇಸ್ ಕೊಂಡೊಯ್ಯಲು ಮತ್ತೊಂದು ಸೂಟ್ ಕೇಸ್ ತರಬೇಕಾದೀತು.
ಯಾಕಂದ್ರೆ ಪ್ರಯಾಣಿಕರ ಸಾಮಾನು ಸರಂಜಾಮುಗಳನ್ನು ವಿಮಾನ ನಿಲ್ದಾಣದ ಸಿಬ್ಬಂದಿ ಮನಬಂದಂತೆ ಎಸೆಯುತ್ತಾರೆ.
ಅಂಥದ್ದೊಂದು ವಿಡಿಯೋ ವೈರಲ್ ಆಗಿದ್ದು ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಇಂಡಿಗೋ ಏರ್ಲೈನ್ಸ್ ನ ಬ್ಯಾಗೇಜ್ ಹ್ಯಾಂಡ್ಲರ್ಗಳು ಟ್ರೇಲರ್ಗೆ ಅಸಡ್ಡೆಯಿಂದ ಬ್ಯಾಗ್ಗಳನ್ನು ಎಸೆದ ಪ್ರಕರಣ ನಂತರ, ಮೆಲ್ಬೋರ್ನ್ ವಿಮಾನ ನಿಲ್ದಾಣದಲ್ಲಿ ಇಬ್ಬರು ಅಧಿಕಾರಿಗಳು ಅಜಾಗರೂಕತೆಯಿಂದ ಬ್ಯಾಗ್ಗಳನ್ನು ಕನ್ವೇಯರ್ ಬೆಲ್ಟ್ ಗೆ ಎಸೆಯುವ ಮತ್ತೊಂದು ವೀಡಿಯೊ ಇಂಟರ್ನೆಟ್ನಲ್ಲಿ ವೈರಲ್ ಆಗಿದೆ. ವರದಿಯ ಪ್ರಕಾರ ಸಂಬಂಧಪಟ್ಟ ಅಧಿಕಾರಿಗಳು ಹೆಚ್ಚಿನ ತನಿಖೆಯ ತನಕ ನೌಕರರನ್ನು ವಜಾಗೊಳಿಸಿದ್ದಾರೆ.
ಕಳೆದ ವಾರ ವೈರಲ್ ಆದ ವೀಡಿಯೊದಲ್ಲಿ, ಬ್ಯಾಗೇಜ್ ಹ್ಯಾಂಡ್ಲರ್ಗಳು ಕನ್ವೇಯರ್ ಬೆಲ್ಟ್ ನಲ್ಲಿ ಸಾಮಾನುಗಳನ್ನು ಎಸೆಯುವುದನ್ನು ಕಾಣಬಹುದು.
ಕೆಲವು ಬ್ಯಾಗ್ ಗಳನ್ನು ಎಷ್ಟು ಕೆಟ್ಟದಾಗಿ ಎಸೆದರೆಂದರೆ ಅವು ಬೆಲ್ಟ್ನಿಂದ ಕೂಡ ಬಿದ್ದವು. ಮೆಲ್ಬೋರ್ನ್ ನಲ್ಲಿ ಕ್ವಾಂಟಾಸ್ ವಿಮಾನವು ಲ್ಯಾಂಡ್ ಆದ ನಂತರ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
https://twitter.com/RachaelHasIdeas/status/1598617082908012544?ref_src=twsrc%5Etfw%7Ctwcamp%5Etweetembed%7Ctwterm%5E1598617082908012544%7Ctwg
https://twitter.com/RachaelHasIdeas/status/1598617082908012544?ref_src=twsrc%5Etfw%7Ctwcamp%5Etweetembed%7Ctwterm%5E1599371813158780928%7Ctwgr%5E8dc7c41d16007d28470e9633f76d056c2fecafc4%7Ctwcon%5Es2_&ref_url=https%3A%2F%2Fwww.news18.com%2Fbuzz%2Fbaggage-staff-mishandle-luggage-at-melbourne-airport-fired-after-video-surfaces-online-6596821.html