ಬಾಗಲಕೋಟೆ: ಪ್ರವಾಸೋದ್ಯಮ ಇಲಾಖೆಯಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಬಳಿಕ ಬಾಗಲಕೋಟೆಯಲ್ಲಿ ಇದೀಗ ಮತ್ತೊಂದು ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿರುವುದು ಬಯಲಾಗಿದೆ.
ಬಾಗಲಕೋಟೆಯ ಸಾರ್ವಜನಿಕ ಜಿಲ್ಲಾ ಗ್ರಂಥಾಲಯದಲ್ಲಿ ಕೋಟ್ಯಂತರ ರೂಪಾಯಿ ಗೋಲ್ ಮಾಲ್ ನಡೆದಿದೆ. ಆಡಿಟ್ ರಿಪೋರ್ಟ್ ನಲ್ಲಿ 1 ಕೋಟಿ 61 ಲಕ್ಷ ರೂ. ಅಕ್ರಮ ನಡೆದಿದೆ ಎಂದು ತಿಳಿದುಬಂದಿದೆ.
ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ಹಾಜಿರಾ ನಸ್ರೀನ್ ರಿಂದ ಈ ಹಿಂದೆ ಇದ್ದ ಅಧಿಕಾರಿಗಳಿಗೆ ನೋಟಿಸ್ ನೀಡಲಾಗಿದೆ. ಅಲ್ಲದೇ ಭ್ರಷ್ಟಾಚಾರ ನಡೆದಿರುವ ಬಗ್ಗೆ ಗ್ರಂಥಾಲಯದ ಆಯುಕ್ತರಿಗೂ ದೂರು ಸಲ್ಲಿಸಲಾಗಿದೆ.
ಹಿಂದಿನ ಗ್ರಂಥಾಲಯದ ಅಧಿಕಾರಿಗಲಾದ ಎನ್.ಎಸ್ ನೆಬಿನಾಳ, ಸುನೀಲ್ ಮುದಗಲ್ ಗೆ ಈ ಬಗ್ಗೆ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. ಆದರೆ ಯಾವುದೇ ಉತ್ತರ ಬಂದಿಲ್ಲ. 1.61 ಕೋಟಿ ರೂ.ಗೆ ಹಿಂದಿನ ಅಧಿಕಾರಿಗಳು ಬಿಲ್ ಕೊಟ್ಟಿಲ್ಲ. ಪುಸ್ತಕ ಖರೀದಿ, ಕರೆಂಟ್ ಬಿಲ್, ಫರ್ನೀಚರ್ ಖರೀದಿ ಕೆಲಸಕ್ಕೆ ಯವುದೇದೇ ಬಿಲ್ ಕೊಡುತ್ತಿಲ್ಲ. ಇದರಿಂದಾಗಿ ಮೇಲಧಿಕಾರಿಗಳಿಗೆ ದೂರು ನೀಡುವ ಬಗ್ಗೆ ಜಿಲ್ಲಾ ಮುಖ್ಯ ಗ್ರಂಥಾಲಯ ಅಧಿಕಾರಿ ಚರ್ಚೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.