ಬಾಗಲಕೋಟೆ: ಬಾಗಲಕೋಟೆಯಲ್ಲಿ ಕಾಣೆಯಾಗಿದ್ದ ಪ್ರೇಮಿಗಳ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಮಗಳ ಪ್ರೀತಿಗೆ ವಿರೋಧಿಸಿ ಕುಟುಂಬದವರಿಂದಲೇ ಇಬ್ಬರನ್ನು ಕೊಲೆ ಮಾಡಲಾಗಿದೆ.
ವಿಶ್ವನಾಥ(22), ರಾಜೇಶ್ವರಿ(17) ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರವಿ, ಹನುಮಂತ, ಬೀರಪ್ಪ ಅವರನ್ನು ಬಂಧಿಸಲಾಗಿದೆ. ವೇಲ್ ನಿಂದ ಕತ್ತು ಬಿಗಿದು ರಾಜೇಶ್ವರಿಯ ಕೊಲೆ ಮಾಡಲಾಗಿದೆ. ಸಹೋದರ ಹಾಗೂ ಮಾವಂದಿರು ರಾಜೇಶ್ವರಿ ಕೊಲೆ ಮಾಡಿದ್ದಾರೆ. ವಿಶ್ವನಾಥನ ಮರ್ಮಾಂಗ, ಎದೆಗೆ ಕಲ್ಲಿನಿಂದ ಹೊಡೆದು ಕೊಲೆ ಮಾಡಲಾಗಿದೆ.
ಇಬ್ಬರನ್ನು ಒಂದು ಮಾಡುವುದಾಗಿ ನಂಬಿಸಿ ವಾಹನದಲ್ಲಿ ಕರೆದುಕೊಂಡು ಬಂದಿದ್ದು, ವಾಹನದಲ್ಲೇ ಇಬ್ಬರನ್ನು ಕೊಲೆ ಮಾಡಿದ್ದಾರೆ. ನಂತರ ಕೃಷ್ಣಾ ನದಿಗೆ ಮೃತ ದೇಹಗಳನ್ನು ಎಸೆದಿದ್ದಾರೆ. ಅಕ್ಟೋಬರ್ 11 ರಂದು ರಾತ್ರಿ ಪುತ್ರಿ ಅಪಹರಣದ ಬಗ್ಗೆ ಕೊಲೆಯಾದ ರಾಜೇಶ್ವರಿ ತಂದೆ ಪರಸಪ್ಪ ದೂರು ನೀಡಿದ್ದ. ಬಾಗಲಕೋಟೆ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಅಕ್ಟೋಬರ್ 3 ರಂದು ವಿಶ್ವನಾಥ ಕಾಣೆಯಾದ ಬಗ್ಗೆ ಗದಗ ಜಿಲ್ಲೆ ನರಗುಂದ ಠಾಣೆಗೆ ವಿಶ್ವನಾಥನ ತಂದೆ ದೂರು ನೀಡಿದ್ದರು. ಅಕ್ಟೋಬರ್ 15 ರಂದು ರಾಜೇಶ್ವರಿ ಅಣ್ಣ ರವಿಯನ್ನು ಸಂಶಯದ ಮೇಲೆ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆ ರಹಸ್ಯ ಬೆಳಕು ಬಂದಿದೆ. ನದಿಯಲ್ಲಿ ಇನ್ನು ವಿಶ್ವನಾಥ, ರಾಜೇಶ್ವರಿ ಶವ ಪತ್ತೆಯಾಗಿಲ್ಲವೆನ್ನಲಾಗಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.