ನವದೆಹಲಿ: ಮಕ್ಕಳ ಸ್ನೇಹಿಯಾಗಿರುವ ಶಿಕ್ಷಣ ನೀತಿ ಜಾರಿಗೆ ಕ್ರಮಕೈಗೊಳ್ಳಲಾಗಿದೆ. ಎರಡನೇ ತರಗತಿಯವರೆಗೆ ಹೋಂವರ್ಕ್ ಇರುವುದಿಲ್ಲ. ಶಾಲೆ ಮಕ್ಕಳ ಬ್ಯಾಗ್ ಭಾರ ಕಡಿಮೆಯಾಗಲಿದೆ.
ಮಕ್ಕಳ ಸ್ನೇಹಿ ಕ್ರಮಗಳನ್ನು ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಸರ್ಕಾರ ಶಿಫಾರಸು ಮಾಡಿದ್ದು, ಇದರನ್ವಯ ಶಾಲೆ ಮಕ್ಕಳಿಗೆ ಲಾಕರ್ ಸೌಲಭ್ಯ ಮತ್ತು ಶಾಲೆಗಳಲ್ಲಿ ತೂಕ ಅಳೆಯುವ ಡಿಜಿಟಲ್ ಯಂತ್ರಗಳನ್ನು ಒದಗಿಸಲಾಗುವುದು.
ಮಕ್ಕಳ ಪುಸ್ತಕದ ಹೊರೆ ತಗ್ಗಿಸಲು ಕ್ರಮಕೈಗೊಂಡಿದ್ದು, 1 ರಿಂದ 10 ನೇ ತರಗತಿವರೆಗಿನ ಮಕ್ಕಳ ಬ್ಯಾಗ್ ದೇಹದ ತೂಕದ ಶೇಕಡ 10 ಕ್ಕಿಂತ ಹೆಚ್ಚಿಗೆ ಇರಬಾರದು ಎಂದು ತಿಳಿಸಲಾಗಿದೆ. ಶಾಲೆಯ ಆವರಣದಲ್ಲಿ ಡಿಜಿಟಲ್ ತೂಕ ಅಳೆಯುವ ಯಂತ್ರಗಳನ್ನು ಇಟ್ಟು ತೂಕದ ಮೇಲೆ ನಿಯಮಿತವಾಗಿ ನಿರ್ವಹಿಸಲು ತಿಳಿಸಲಾಗಿದೆ.
ಎರಡನೇ ತರಗತಿಯವರೆಗೆ ಹೋಂವರ್ಕ್ ಇರುವುದಿಲ್ಲ. 3 ರಿಂದ 5 ನೇ ತರಗತಿ ಮಕ್ಕಳಿಗೆ ವಾರಕ್ಕೆ ಗರಿಷ್ಠ 2 ಗಂಟೆ ಹೋಂವರ್ಕ್, 6 ರಿಂದ 8 ನೇ ತರಗತಿ ಮಕ್ಕಳಿಗೆ ದಿನಕ್ಕೆ ಗರಿಷ್ಠ 1 ಗಂಟೆ ಹೋಂ ವರ್ಕ್, 9 ರಿಂದ 12 ನೇ ತರಗತಿಯ ಮಕ್ಕಳಿಗೆ ಪ್ರತಿದಿನ ಕನಿಷ್ಠ 2 ಗಂಟೆ ಹೋಂವರ್ಕ್ ಇರುತ್ತದೆ. ಮಕ್ಕಳಿಗೆ ಅನುಕೂಲವಾಗುವಂತೆ ಶಾಲಾ ಬ್ಯಾಗ್ ಮಾದರಿಯನ್ನು ಕೂಡ ನೀಡಲಾಗಿದೆ.