ಬ್ಯಾಂಡ್ಮಿಂಟನ್ ತಾರೆ ಪಿ.ವಿ.ಸಿಂಧುಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು, ಡಿ.22 ರಂದು ಉದ್ಯಮಿಯೋರ್ವರ ಜೊತೆ ಅವರ ಮದುವೆ ನಿಶ್ಚಯವಾಗಿದೆ.
ಸಿಂಧು ಅವರು ಹೈದರಾಬಾದ್ ಮೂಲದ ಪೊಸಿಡೆಕ್ಸ್ ಟೆಕ್ನಾಲಜೀಸ್ ನ ಕಾರ್ಯನಿರ್ವಾಹಕ ನಿರ್ದೇಶಕ ವೆಂಕಟ ದತ್ತ ಸಾಯಿ ಅವರನ್ನು ಡಿಸೆಂಬರ್ 22 ರಂದು ಉದಯಪುರದಲ್ಲಿ ವಿವಾಹವಾಗಲಿದ್ದಾರೆ .
ಡಿಸೆಂಬರ್ 22 ರಂದು ಮದುವೆ ನಡೆಯಲಿದ್ದು, ಡಿ. 24ರಂದು ಹೈದರಾಬಾದ್ ನಲ್ಲಿ ಆರತಕ್ಷತೆ ನಡೆಯಲಿದೆ.
ಎರಡು ಬಾರಿ ಒಲಿಂಪಿಕ್ ಪದಕ ವಿಜೇತೆ ಸಿಂಧು ವಿವಾಹ ಕಾರ್ಯಕ್ರಮಗಳು ಡಿಸೆಂಬರ್ 20 ರಿಂದ ಪ್ರಾರಂಭವಾಗಲಿವೆ.
ಲಾಸ್ ಏಂಜಲೀಸ್ ನಲ್ಲಿ ನಡೆಯಲಿರುವ 2028 ರ ಒಲಿಂಪಿಕ್ ಕ್ರೀಡಾಕೂಟಕ್ಕೆ ತಯಾರಿ ನಡೆಸುತ್ತಿರುವ ಸಿಂಧು ಮುಂದಿನ ಎರಡು ವರ್ಷಗಳವರೆಗೆ ಖಂಡಿತವಾಗಿಯೂ ಆಟವನ್ನು ಆಡುವುದಾಗಿ ಭಾನುವಾರ ಹೇಳಿದ್ದಾರೆ.
29 ವರ್ಷದ ಮಾಜಿ ವಿಶ್ವ ಚಾಂಪಿಯನ್ ಸೈಯದ್ ಮೋದಿ ಇಂಟರ್ನ್ಯಾಷನಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಜಯಗಳಿಸುವ ಮೂಲಕ ಸುದೀರ್ಘ ಪ್ರಶಸ್ತಿ ಬರವನ್ನು ಕೊನೆಗೊಳಿಸಿದರು. ಫೈನಲ್ನಲ್ಲಿ ಸಿಂಧು ಚೀನಾದ ವಿಶ್ವದ 119 ನೇ ಶ್ರೇಯಾಂಕದ ವು ಲುವೊ ಯು ಅವರನ್ನು 21-14, 21-16 ಅಂತರದಿಂದ ಸೋಲಿಸಿ ಪಂದ್ಯಾವಳಿಯಲ್ಲಿ ಮೂರನೇ ಬಾರಿಗೆ ಪ್ರಶಸ್ತಿಯನ್ನು ಗೆದ್ದರು.