ಹಾವೇರಿ: ಬ್ಯಾಡಗಿಯ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗುರುವಾರ ಕಡ್ಡಿ ತಳಿ ಮೆಣಸಿನ ಕಾಯಿ ದರ ದಿಢೀರ್ ಏರಿಕೆ ಕಂಡಿದೆ.
ಪ್ರತಿ ಕ್ವಿಂಟಲ್ ಮೆಣಸಿನ ಕಾಯಿಗೆ 70,000 ರೂ.ಗೆ ಮಾರಾಟವಾಗಿದೆ. ಗುಂಟೂರು ಮತ್ತು ಡಬ್ಬಿ ತಳಿಗಳ ದರ ಸ್ಥಿರತೆ ಕಾಯ್ದುಕೊಂಡಿದ್ದು, ಕಡ್ಡಿ ತಳಿ ಪ್ರತಿ ಕ್ವಿಂಟಲ್ ಗೆ ಸೋಮವಾರ 42,500 ರೂಪಾಯಿಗೆ ಮಾರಾಟವಾಗಿತ್ತು. ಗುರುವಾರ 44,500 ರೂ.ಗೆ ಏರಿಕೆ ಕಂಡಿತ್ತು. ಗುಣಮಟ್ಟದ ಕಡ್ಡಿ ತಳಿ ಮೆಣಸಿನ ಕಾಯಿ 70 ಸಾವಿರ ರೂ.ವರೆಗೂ ಮಾರಾಟವಾಗಿದೆ.
ಗುರುವಾರ ಒಟ್ಟು 53,669 ಚೀಲ ಮೆಣಸಿನ ಕಾಯಿ ಮಾರಾಟಕ್ಕೆ ಬಂದಿದ್ದು, ಕಡ್ಡಿ ತಳಿ ಮೆಣಸಿನಕಾಯಿ ಗರಿಷ್ಠ ದರ 70,080 ರೂ., ಡಬ್ಬಿ ತಳಿ ಗರಿಷ್ಠ ದರ 62,399 ರೂ., ಗುಂಟೂರು ತಳಿ ಮೆಣಸಿನಕಾಯಿ ಗರಿಷ್ಠ ದರ 19,289 ರೂ. ಇದೆ.