ಬೆಂಗಳೂರು : ಬೆಂಗಳೂರಲ್ಲಿ ಪಬ್’ಗೆ ಹೋಗಿದ್ದ ಯುವತಿ ಜೊತೆ ಯುವಕನೋರ್ವ ಅಸಭ್ಯವಾಗಿ ವರ್ತಿಸಿದ್ದು, ಆತನ ವಿರುದ್ಧ ವಿರುದ್ಧ FIR ದಾಖಲಾಗಿದೆ.
ಕಾಡುಬೀಸನಹಳ್ಳಿಯ ಸೋಷಿಯಲ್ ಪಬ್ ನಲ್ಲಿ ಈ ಘಟನೆ ನಡೆದಿದ್ದು, ಪಬ್ ಗೆ ಬಂದ ಯುವತಿಯನ್ನು ಅಸಭ್ಯವಾಗಿ ಮುಟ್ಟಿ ಕಿರುಕುಳ ನೀಡಿದ್ದಾನೆ. ಯುವತಿ ನೀಡಿದ ದೂರಿನ ಮೇರೆಗೆ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.
ಪಬ್ ಗೆ ಬಂದ ಯುವತಿಯನ್ನು ಯುವಕ ಅಸಭ್ಯವಾಗಿ ಸ್ಪರ್ಶಿಸಿ ಕಿರುಕುಳ ನೀಡಿದ್ದು, ಪಬ್ ನಲ್ಲಿ ಸರಿಯಾಗಿ ಭದ್ರತೆ ನೀಡಿಲ್ಲ ಎಂದು ಯುವತಿ ರಂಪಾಟ ನಡೆಸಿದ್ದಾಳೆ. ಈ ಸಂಬಂಧ ಮಾರತಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.