![](https://kannadadunia.com/wp-content/uploads/2023/09/12af82e2-811c-48d8-9fde-3250197cbc9d-1.jpg)
ಅಭಿಷೇಕ್ ಅಂಬರೀಶ್ ನಟಿಸುತ್ತಿರುವ ಬ್ಯಾಡ್ ಮ್ಯಾನರ್ಸ್ ಸಿನಿಮಾ ಈಗಾಗಲೇ ಟ್ರೆಂಡಿಂಗ್ ನಲ್ಲಿದ್ದು ಒಂದರ ಮೇಲೊಂದು ಸಿಹಿ ಸುದ್ದಿಯನ್ನು ಚಿತ್ರತಂಡ ನೀಡುತ್ತಲೇ ಇದೆ ಇದೀಗ ಬ್ಯಾಡ್ ಮ್ಯಾನರ್ಸ್ ಚಿತ್ರದ ಜೀವ ಎಂಬ ಲಿರಿಕಲ್ ಸಾಂಗ್ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿದೆ.
ಸಿದ್ದಾರ್ಥ್ ಸುಂದರ್ ಹಾಗೂ ಚರಣ್ ರಾಜ್ ಈ ಹಾಡಿಗೆ ಧ್ವನಿಯಾಗಿದ್ದು ಜಯಂತ್ ಕಾಯ್ಕಿಣಿ ಅವರ ಸಾಹಿತ್ಯವಿದೆ.
ಸೂರಿ ನಿರ್ದೇಶನದ ಈ ಚಿತ್ರವನ್ನು ಸ್ಟುಡಿಯೋ 18 ಬ್ಯಾನರ್ ನಡಿ ಸುಧೀರ್ ಕೆಎಂ ನಿರ್ಮಾಣ ಮಾಡಿದ್ದಾರೆ. ಅಭಿಷೇಕ್ ಅಂಬರೀಶ್ ಹಾಗೂ ರಚಿತರಾಮ್ ಮುಖ್ಯ ಭೂಮಿಕೆಯಲ್ಲಿದ್ದ ಶರತ್ ಲೋಹಿತಾಶ್ವ ಕುರಿ ಪ್ರತಾಪ್ ದತ್ತಣ್ಣ ತಾರಾ ಬ್ಯಾಂಕಾಕ್ ದಿಲೀಪ್ ಮಿತ್ರ ಪ್ರಶಾಂತ್ ನಿರಂಜನ್ ಪಂಕಜ ಬಾಬು ವಿಜಯ್ ಬೆಳಗಾಂ ಸೇರಿದಂತೆ ಹಲವರ ತಾರಾ ಬಳಗವಿದೆ.