alex Certify ಮಾನವ ರಕ್ತಕ್ಕಾಗಿ ಹಪಹಪಿಸುತ್ತವೆ ಬ್ಯಾಕ್ಟೀರಿಯಾಗಳು, ಈ ರಕ್ತಪಿಶಾಚಿಗಳನ್ನು ಪತ್ತೆ ಮಾಡಿದ್ದಾರೆ ವಿಜ್ಞಾನಿಗಳು ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಾನವ ರಕ್ತಕ್ಕಾಗಿ ಹಪಹಪಿಸುತ್ತವೆ ಬ್ಯಾಕ್ಟೀರಿಯಾಗಳು, ಈ ರಕ್ತಪಿಶಾಚಿಗಳನ್ನು ಪತ್ತೆ ಮಾಡಿದ್ದಾರೆ ವಿಜ್ಞಾನಿಗಳು !

Scientists find 'vampire' bacteria that has a thirst for HUMAN blood |  Daily Mail Online

ಬ್ಯಾಕ್ಟೀರಿಯಾಗಳು ಆರೋಗ್ಯಕ್ಕೆ ಎಷ್ಟೆಲ್ಲಾ ಸಮಸ್ಯೆ ಮಾಡುತ್ತವೆ ಅನ್ನೋದು ನಮಗೆಲ್ಲ ತಿಳಿದಿದೆ. ಆದರೆ ಹೊಸದೊಂದು ಅಧ್ಯಯನದ ಪ್ರಕಾರ ರಕ್ತಪಿಶಾಚಿಗಳಂತೆ ಬ್ಯಾಕ್ಟೀರಿಯಾಗಳು ಸಹ ಮಾನವ ರಕ್ತಕ್ಕೆ ಆಕರ್ಷಿತವಾಗುತ್ತವೆ. ಇವುಗಳ ‘ರಕ್ತಪಿಶಾಚಿ ಪ್ರವೃತ್ತಿ’ಯನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ.

ಬ್ಯಾಕ್ಟೀರಿಯಾಗಳು ರಕ್ತದ ದ್ರವ ಭಾಗದ ಕಡೆಗೆ ಆಕರ್ಷಿತವಾಗುತ್ತವೆ, ಅಂದರೆ ಸೀರಮ್. ಬ್ಯಾಕ್ಟೀರಿಯಾವು ಆಹಾರವಾಗಿ ಬಳಸಬಹುದಾದ ಸೀರಮ್‌ನಲ್ಲಿ ಪೋಷಕಾಂಶಗಳಿವೆ. ಹಾಗಾಗಿ ವಾಷಿಂಗ್ಟನ್ ಸ್ಟೇಟ್ ಯೂನಿವರ್ಸಿಟಿ (WSU) ಇದನ್ನು ಬ್ಯಾಕ್ಟೀರಿಯಾದ ರಕ್ತಪಿಶಾಚಿ ಎಂದು ಕರೆದಿದೆ. ಇಂತಹ ಗುಣಲಕ್ಷಣಗಳು E.coli ಮತ್ತು Salmonella ನಂತಹ ಬ್ಯಾಕ್ಟೀರಿಯಾಗಳಲ್ಲಿ ಕಂಡುಬರುತ್ತವೆ. ಈ ಎರಡೂ ಬ್ಯಾಕ್ಟೀರಿಯಾಗಳು ಹೊಟ್ಟೆಯ ಕಾಯಿಲೆಗಳಿಗೆ ಕಾರಣವಾಗುತ್ತವೆ.

ಈ ಬ್ಯಾಕ್ಟೀರಿಯಾಗಳು ಕರುಳಿನಿಂದ ಬಹಳ ಬೇಗನೆ ಹೊರಬರುತ್ತವೆ ಮತ್ತು ರಕ್ತವನ್ನು ಪ್ರವೇಶಿಸುತ್ತವೆ. ಇವು ರಕ್ತದಲ್ಲಿ ಬೆರೆತ ನಂತರ ಮಾರಣಾಂತಿಕವಾಗಬಹುದು. ಅಧ್ಯಯನದ ಪ್ರಕಾರ, ಬ್ಯಾಕ್ಟೀರಿಯಾವನ್ನು ಹೆಚ್ಚು ಆಕರ್ಷಿಸುವ ರಾಸಾಯನಿಕಗಳಲ್ಲಿ ಸೆರಿನ್ ಒಂದಾಗಿದೆ. ಇದು ಮಾನವ ರಕ್ತದಲ್ಲಿ ಕಂಡುಬರುವ ಅಮೈನೋ ಆಮ್ಲ. ಪ್ರೋಟೀನ್ ಪಾನೀಯಗಳಲ್ಲಿ ಸೆರಿನ್ ಅನ್ನು ವ್ಯಾಪಕವಾಗಿ ಬಳಸಲಾಗುತ್ತದೆ.

ರಕ್ತಪ್ರವಾಹಕ್ಕೆ ಸೋಂಕು ತಗುಲಿಸುವ ಬ್ಯಾಕ್ಟೀರಿಯಾಗಳು ಮಾರಣಾಂತಿಕವಾಗಬಹುದು. ಬ್ಯಾಕ್ಟೀರಿಯಾಗಳು ಮಾನವ ರಕ್ತದಲ್ಲಿನ ರಾಸಾಯನಿಕವನ್ನು ಗ್ರಹಿಸುತ್ತವೆ ಮತ್ತು ಅದರ ಕಡೆಗೆ ಈಜುತ್ತವೆ. ಅಂತಹ ಮೂರು ಬ್ಯಾಕ್ಟೀರಿಯಾಗಳೆಂದರೆ ಸಾಲ್ಮೊನೆಲ್ಲಾ ಎಂಟೆರಿಕಾ, ಎಸ್ಚೆರಿಚಿಯಾ ಕೋಲಿ (ಇ. ಕೋಲಿ) ಮತ್ತು ಸಿಟ್ರೊಬ್ಯಾಕ್ಟರ್ ಕೊಸೇರಿ.

ಈ ಅಧ್ಯಯನಕ್ಕಾಗಿ ಉನ್ನತ-ಶಕ್ತಿಯ ಸೂಕ್ಷ್ಮದರ್ಶಕ ವ್ಯವಸ್ಥೆಯನ್ನು ವಿನ್ಯಾಸಗೊಳಿಸಲಾಗಿದೆ. ಸಂಶೋಧಕರು ಕರುಳಿನ ರಕ್ತಸ್ರಾವವನ್ನು ಉತ್ತೇಜಿಸಲು ಮಾನವನ ಸೀರಮ್ ಅನ್ನು ಬಹಳ ಕಡಿಮೆ ಪ್ರಮಾಣದಲ್ಲಿ ಚುಚ್ಚಿ, ಬ್ಯಾಕ್ಟೀರಿಯಾವು ಮೂಲದ ಕಡೆಗೆ ಚಲಿಸುವುದನ್ನು ವೀಕ್ಷಿಸಿದ್ದಾರೆ. ಬ್ಯಾಕ್ಟೀರಿಯಾದ ಪ್ರತಿಕ್ರಿಯೆಯು ಸಾಕಷ್ಟು ವೇಗವಾಗಿತ್ತು. ರೋಗವನ್ನು ಉಂಟುಮಾಡುವ ಬ್ಯಾಕ್ಟೀರಿಯಾವು ಸೀರಮ್ ಅನ್ನು ಪತ್ತೆ ಮಾಡಲು ಒಂದು ನಿಮಿಷವೂ ತೆಗೆದುಕೊಳ್ಳಲಿಲ್ಲ.

ಸಂಶೋಧಕರು ಅಧ್ಯಯನಕ್ಕಾಗಿ ಬಳಸಿದ ಬ್ಯಾಕ್ಟೀರಿಯಾವನ್ನು ಮಲ್ಟಿ-ಡ್ರಗ್-ರೆಸಿಸ್ಟೆಂಟ್ ಎಂಟರ್‌ಬ್ಯಾಕ್ಟೀರಿಯಾಸಿ ರೋಗಕಾರಕಗಳು ಎಂದು ಕರೆಯಲಾಗುತ್ತದೆ. ವಿಶ್ವ ಆರೋಗ್ಯ ಸಂಸ್ಥೆ (WHO) ಅದಕ್ಕೆ ‘ಆದ್ಯತಾ ರೋಗಕಾರಕಗಳು’ ಎಂಬ ಹಣೆಪಟ್ಟಿ ನೀಡಿದೆ. WHO ಪ್ರಕಾರ ಈ ರೋಗಕಾರಕಗಳು 12 ಬ್ಯಾಕ್ಟೀರಿಯಾದ ಕುಟುಂಬಗಳ ಗುಂಪಿಗೆ ಸೇರಿವೆ. ಅವುಗಳ ಪ್ರತಿಜೀವಕ ಪ್ರತಿರೋಧ ಮಾನವನ ಆರೋಗ್ಯಕ್ಕೆ ದೊಡ್ಡ ಅಪಾಯ.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...