ಮುಂಬೈ: 90 ರ ದಶಕದ ಬಾಯ್‌ಬ್ಯಾಂಡ್ ಬ್ಯಾಕ್‌ಸ್ಟ್ರೀಟ್ ಬಾಯ್ಸ್ ಪ್ರಪಂಚದಾದ್ಯಂತದ ಅಭಿಮಾನಿಗಳನ್ನು ರೋಮಾಂಚನಗೊಳಿಸಿದ್ದಾರೆ. ತಮ್ಮ ಮೂರು ದಶಕಗಳ ವೃತ್ತಿಜೀವನದಲ್ಲಿ, ಎಜೆ ಮೆಕ್ಲೀನ್, ಬ್ರಿಯಾನ್ ಲಿಟ್ರೆಲ್, ನಿಕ್ ಕಾರ್ಟರ್, ಹೋವಿ ಡೊರೊ ಮತ್ತು ಕೆವಿನ್ ರಿಚರ್ಡ್‌ಸನ್ ಅವರು ಫ್ಯಾನ್ಸ್ ನಿದ್ದೆ ಕದ್ದಿದ್ದಾರೆ.
ಅಗಾಧ ಜನಪ್ರಿಯ ಬೇಡಿಕೆಯಿಂದಾಗಿ, ಅವರು ಈಗ ವಿಶ್ವ ಪ್ರವಾಸ ಕೈಗೊಂಡಿದ್ದು, ಮುಂಬೈ ಮತ್ತು ದೆಹಲಿಯಲ್ಲಿ ಪ್ರದರ್ಶನ ನಿಡಲಿದ್ದಾರೆ. ಇವರ ‘ಐ ವಾಂಟ್ ಇಟ್ ದಟ್ ವೇ’, ‘ಎವೆರಿಬಡಿ’ (ಬ್ಯಾಕ್‌ಸ್ಟ್ರೀಟ್ಸ್ ಬ್ಯಾಕ್), ‘ಕ್ವಿಟ್ ಪ್ಲೇಯಿಂಗ್ ಗೇಮ್ಸ್ ವಿತ್ ಮೈ ಹಾರ್ಟ್’ ಮುಂತಾದ ಮೆಗಾವ್ಯಾಟ್ ಹಿಟ್‌ಗಳ ಪ್ರದರ್ಶನ ನೀಡಲಿದ್ದಾರೆ. ಇತ್ತೀಚಿನ ಆಲ್ಬಂ ‘ಡೋಂಟ್ ಗೋ ಬ್ರೇಕಿಂಗ್ ಮೈ ಹಾರ್ಟ್’, ‘ಚಾನ್ಸಸ್’ ಮತ್ತು ‘ನೋ ಪ್ಲೇಸ್’ಗಳ ಮೂಲಕ ಫ್ಯಾನ್ಸ್ಗಳಿಗೆ ಮನರಂಜನೆ ನೀಡಲಿದ್ದಾರೆ.
ವಿಮಾನ ನಿಲ್ದಾಣದಲ್ಲಿ ಅಭಿಮಾನಿಗಳಿಂದ ಅದ್ದೂರಿ ಸ್ವಾಗತ ಸಿಕ್ಕಿದೆ. ನಿಕ್ ಕಾರ್ಟರ್ ಅವರು ಈ ಕುರಿತು ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಮುಂಬೈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅವರು, “ನನ್ನ ಇಡೀ ವೃತ್ತಿಜೀವನದಲ್ಲಿ ನಾನು ಈ ರೀತಿಯದನ್ನು ನೋಡಿದ್ದು ಇದೇ ಮೊದಲ ಬಾರಿಗೆ ಎಂದು ಬರೆದುಕೊಂಡಿದ್ದಾರೆ.
“ಮುಂಬೈನ ಹೋಟೆಲ್‌ಗೆ ಆಗಮಿಸಿದ ಕ್ಷಣ ರೋಮಾಂಚನವಾಗಿತ್ತು. ಹೋಟೆಲ್ ಸಿಬ್ಬಂದಿ ನಮ್ಮ ಎಲ್ಲಾ ಹಾಡುಗಳನ್ನು ರೀಮಿಕ್ಸ್ ಮಾಡಿ ಬಾಲಿವುಡ್ ಶೈಲಿಯ ನೃತ್ಯವನ್ನು ಸಿದ್ಧಪಡಿಸಿದ್ದರು. ನಾವು ನಿಜವಾಗಿಯೂ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದೇವೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
https://www.youtube.com/watch?v=mYWlDemcnRU