ಹಾಸನ : ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣದಲ್ಲಿ ಸಿಲುಕಿರುವ ಮಾಜಿ ಸಚಿವ ಹೆಚ್ ಡಿ ರೇವಣ್ಣ ಇಂದು ಹೊಳೆನರಸೀಪುರದ ನಿವಾಸಕ್ಕೆ ಆಗಮಿಸುತ್ತಿದ್ದು, ಈ ಹಿನ್ನೆಲೆ ಬಿಗಿ ಪೊಲೀಸ್ ಭದ್ರತೆ ವಹಿಸಲಾಗಿದೆ.
20 ದಿನಗಳ ಬಳಿಕ ರೇವಣ್ಣ ಅವರು ತಮ್ಮ ಹೊಳೆನರಸೀಪುರದ ನಿವಾಸಕ್ಕೆ ಆಗಮಿಸುತ್ತಿದ್ದು, ಬಿಗಿ ಭದ್ರತೆ ವಹಿಸಲಾಗಿದೆ. 50 ಕ್ಕೂ ಹೆಚ್ಚು ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ. ಜೆಡಿಎಸ್ ಮುಖಂಡರು, ಬೆಂಬಲಿಗರು ಹೆಚ್ ಡಿ ರೇವಣ್ಣ ಆಗಮನಕ್ಕಾಗಿ ಕಾಯುತ್ತಿದ್ದಾರೆ.