ದಾವಣಗೆರೆ: ಕೊರೊನಾ ಮೂರನೇ ಅಲೆ ಆತಂಕದ ನಡುವೆಯೇ ರಾಜ್ಯದಲ್ಲಿ ರೂಪಾಂತರಿ ಹೊಸ ವೈರಸ್ ಅಟ್ಟಹಾಸ ಆರಂಭವಾಗಿದೆ. ಈ ನಡುವೆ ಮಕ್ಕಳನ್ನು ಕಾಡುತ್ತಿರುವ MIS-C ಎಂಬ ಮಾರಣಾಂತಿಕ ರೋಗ ಲಕ್ಷಗಳು ಕಂದಮ್ಮಗಳನ್ನೇ ಬಲಿ ಪಡೆಯುತ್ತಿದೆ.
ಕೊರೊನಾ ಲಸಿಕೆ ಹಾಕಿಸಿಕೊಂಡ ವಿಮಾನ ಪ್ರಯಾಣಿಕರಿಗೆ ಖುಷಿ ಸುದ್ದಿ
ಬೆಣ್ಣೆನಗರಿ ದಾವಣಗೆರೆ ಜಿಲ್ಲೆಯಲ್ಲಿ MIS-C (Multisystem inflammatory syndrome in children) ಎಂಬ ರೋಗಕ್ಕೆ ಇದೀಗ 16ದಿನಗಳ ಹಸುಗೂಸು ಸಾವನ್ನಪ್ಪಿದೆ. ಜ್ವರ ಹಾಗೂ ಭೇದಿಯಿಂದ ಬಳಲುತ್ತಿದ್ದ ನವಜಾತ ಶಿಶುವನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮಗು ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ.
ದಾವಣಗೆರೆಯಲ್ಲಿ ನಾಲ್ಕಕ್ಕೂ ಹೆಚ್ಚು ಮಕ್ಕಳು ಮಿಸ್ಸಿ ರೋಗ ಲಕ್ಷಣಗಳಿಂದ ಬಳಲುತ್ತಿದ್ದು, ಜಿಲ್ಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.