ನವಜಾತ ಶಿಶುಗಳಲ್ಲಿ ತಲೆಗೂದಲು ಹೇರಳವಾಗಿ ಇರೋದು ಅಸಾಮಾನ್ಯ ವಿಷಯವೇನಲ್ಲ. ಅನೇಕ ತಾಯಂದಿರಿಗೆ ಇದು ಅತ್ಯಂತ ಖುಷಿ ವಿಚಾರ ಕೂಡ ಹೌದು. ಆದರೆ ದೇಹದ ತುಂಬೆಲ್ಲ ಗಾಢವಾಗಿ ಕೂದಲು ಇರೋದು ಅಂದ್ರೆ ಮಾತ್ರ ಕೊಂಚ ತಲೆಕೆಡಿಸಿಕೊಳ್ಳಬೇಕಾದ ವಿಚಾರವೇ ಸರಿ.
ಕೀಯೊನ್ನಾ ಎಂಬ ತಾಯಿ ತಮ್ಮ ಮಗುವಿಗೆ ದೇಹದ ತುಂಬೆಲ್ಲ ಕೂದಲು ಬೆಳೆಯುತ್ತಿರೋದನ್ನ ಕಂಡು ಶಾಕ್ ಆಗಿದ್ದಾರೆ. ಈ ಮಗು ಜನಿಸಿದ ಸಂದರ್ಭದಲ್ಲಿ ಎಲ್ಲಾ ಮಗುವಿನಂತೆ ತಲೆಗೂದಲನ್ನ ಹೊಂದಿತ್ತು. ಆದರೆ ಎರಡು ತಿಂಗಳು ಕಳೆಯುತ್ತಿದ್ದಂತೆಯೇ ಈ ಹೆಣ್ಣು ಮಗುವಿನ ದೇಹದ ತುಂಬೆಲ್ಲ ಕೂದಲು ಬೆಳೆಯೋದಕ್ಕೆ ಆರಂಭಿಸಿದೆ.
ಅಗ್ಗದ ಬೆಲೆಗೆ ಚಿನ್ನ ಖರೀದಿಸಲು ಸಿಗ್ತಿದೆ ಮತ್ತೊಂದು ಅವಕಾಶ
ಇದೀಗ ಹೆಣ್ಣು ಕಂದಮ್ಮ ಮೈಲಾ ತೊಡೆಯಲ್ಲಿ, ಕೈಗಳಲ್ಲಿ ಅಷ್ಟೇ ಏಕೆ ಕೆನ್ನೆ ಮೇಲೂ ಕೂದಲು ಹೇರಳವಾಗಿ ಬೆಳೆದಿದೆ. ಮೈಲಾ ಕೀ ಯೊನ್ನಾಗೆ ಜನಿಸಿದ ನಾಲ್ಕನೇ ಮಗು ಆಗಿದ್ದಾಳೆ. ಈ ಹಿಂದೆ ಜನಿಸಿದ ಮೂರು ಮಕ್ಕಳಲ್ಲಿ ಈ ಕೂದಲಿನ ಸಮಸ್ಯೆ ಇಲ್ಲ.
ನನ್ನ ಮಗುವಿನ ದೇಹದಲ್ಲಿ ಈ ರೀತಿ ಕೂದಲು ಬೆಳೆಯುತ್ತಿರೋದನ್ನ ಕಂಡು ನಾನು ಆಘಾತಕ್ಕೆ ಒಳಗಾಗಿದ್ದೆ. ಮೈಲಾ ತುಂಬಾನೇ ಸುಂದರವಾಗಿದ್ದಾಳೆ. ಹೀಗಾಗಿ ಈ ಹೆಚ್ಚುವರಿ ಕೂದಲೂ ಅವಳ ಸೌಂದರ್ಯಕ್ಕೆ ಅಡ್ಡಿ ಬರಲಾರದು. ಮೈಲಾರಂತಹ ಮಕ್ಕಳನ್ನ ಹೊಂದಿರುವ ತಾಯಂದಿರಿಗೆ ನಾನು ಹೇಳೋದಿಷ್ಟೆ. ನಿಮ್ಮ ಮಗುವನ್ನ ಪ್ರೀತಿಯಿಂದ ಪೋಷಿಸಿ ಎಂದು ಹೇಳಿದ್ದಾರೆ.