ಮಂಡ್ಯ: 7ನೇ ಮಗುವಿಗೆ ಜನ್ಮ ನೀಡಿದ ಮಹಿಳೆ ನವಜಾತ ಶಿಶು ಬಿಟ್ಟು ಪರಾರಿಯಾದ ಘಟನೆ ಮಂಡ್ಯ ಜಿಲ್ಲಾಸ್ಪತ್ರೆಯಲ್ಲಿ ಸೋಮವಾರ ನಡೆದಿದೆ.
ಹಾಡ್ಯ ಗ್ರಾಮದ ಬನ್ನಮ್ಮ ನವಜಾತ ಶಿಶು ಬಿಟ್ಟು ಪರಾರಿಯಾಗಿದ್ದಾರೆ. ಪ್ರಕರಣ ಕುರಿತು ಮಂಡ್ಯ ನಗರ ಪೂರ್ವ ಪೊಲೀಸ್ ಠಾಣೆಯಲ್ಲಿ ಮಕ್ಕಳ ರಕ್ಷಣಾ ಘಟಕದ ಕಾನೂನು ಪರಿವೀಕ್ಷಕಿ ಎಸ್.ಎಂ. ಶೈಲಜಾ ದೂರು ನೀಡಿದ್ದಾರೆ.
ಫೆಬ್ರವರಿ 23ರಂದು ಜಿಲ್ಲಾಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಬನ್ನಮ್ಮ ದಾಖಲಾಗಿದ್ದು, ಅವರು ಮಕ್ಕಳನ್ನು ಮಾರಾಟ ಮಾಡುತ್ತಾರೆಂಬ ದೂರಿನ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗಿದೆ. 7 ಮಕ್ಕಳಿಗೆ ಜನ್ಮ ನೀಡಿರುವುದಾಗಿ ಬನ್ನಮ್ಮ ತಿಳಿಸಿದ್ದಾರೆ. ಮಕ್ಕಳ ರಕ್ಷಣಾ ಘಟಕದ ಸದಸ್ಯರು ಅವರಿಗೆ ಬುದ್ಧಿವಾದ ಹೇಳಿದ್ದು, ಇದರಿಂದ ಆತಂಕಗೊಂಡ ಬನ್ನಮ್ಮ ನವಜಾತ ಶಿಶು ಬಿಟ್ಟು ಜೊತೆಗಿದ್ದ 5 ವರ್ಷದ ಪುತ್ರಿಯೊಂದಿಗೆ ಪರಾರಿಯಾಗಿದ್ದಾರೆ.