ಯಾದಗಿರಿ: ಮದ್ಯ ಸೇವಿಸುತ್ತಿದ್ದಾಗ ಅಳುತ್ತಿದ್ದಕ್ಕೆ ತಂದೆಯೇ ಪುತ್ರಿಯನ್ನು ಕೊಲೆ ಮಾಡಿದ್ದಾನೆ. ಯಾದಗಿರಿ ಜಿಲ್ಲೆ ಬದ್ದೇಪಲ್ಲಿ ಗ್ರಾಮದಲ್ಲಿ ಘಟನೆ ನಡೆದಿದೆ.
9 ತಿಂಗಳ ತನುಶ್ರೀಯನ್ನು ಪಾಪಿ ತಂದೆ 30 ವರ್ಷದ ರಾಮು ಕೊಂದು ಹಾಕಿದ್ದಾನೆ. ಮನೆಯಲ್ಲಿ ರಾಮು ಮದ್ಯ ಸೇವಿಸುತ್ತಿದ್ದಾಗ ತನುಶ್ರೀ ಅಳುತ್ತಿದ್ದ ಹಿನ್ನೆಲೆಯಲ್ಲಿ ಸಿಟ್ಟಿಗೆದ್ದ ಕೃತ್ಯವೆಸಗಿದ್ದಾನೆ. ತನುಶ್ರೀ ಕುತ್ತಿಗೆಯಲ್ಲಿದ್ದ ದಾರ ಹಿಡಿದು ಮೇಲೆ ಎತ್ತಿದ್ದಾನೆ. ಉಸಿರುಗಟ್ಟಿ ತನುಶ್ರೀ ಸಾವನ್ನಪ್ಪಿದ್ದಾಳೆ.
ಪತ್ನಿ ಹಾಗೂ ತಾಯಿ ಕೂಲಿ ಕೆಲಸಕ್ಕೆ ಹೋಗಿದ್ದಾಗ ಮನೆಯಲ್ಲೇ ಮದ್ಯ ಸೇವಿಸುತ್ತಿದ್ದ ರಾಮು ಪುತ್ರಿಯ ಕೊಲೆ ಮಾಡಿದ್ದಾನೆ. ಆರೋಪಿಯನ್ನು ಸೈದಾಪುರ ಠಾಣೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.