alex Certify ಸ್ನೇಹಕ್ಕೆ ಎಣೆಯೆಲ್ಲಿ ? ನೀರು ಕುದುರೆ – ಜಿರಾಫೆಯ ಪ್ರೀತಿ ಕಂಡು ಮನಸೋತ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸ್ನೇಹಕ್ಕೆ ಎಣೆಯೆಲ್ಲಿ ? ನೀರು ಕುದುರೆ – ಜಿರಾಫೆಯ ಪ್ರೀತಿ ಕಂಡು ಮನಸೋತ ನೆಟ್ಟಿಗರು

ಕೆಲವೊಮ್ಮೆ ಪ್ರೀತಿ, ಸ್ನೇಹ, ಮಮತೆ ಎಂದರೆ ಹಾಗೆನೇ. ಇದಕ್ಕೆ ಬೆಲೆ ಕಟ್ಟಲಾಗದು. ಯಾವುದೋ ಪ್ರಾಣಿ ಇನ್ನಾವುದೋ ಪ್ರಾಣಿಗೆ ಹಾಲುಣಿಸುವುದು, ಅನ್ನ ನೀಡುವುದು ಎಲ್ಲವೂ ನೋಡುಗರನ್ನು ಮೂಕವಿಸ್ಮಿತರನ್ನಾಗಿಸುತ್ತವೆ.

ಇದೀಗ ಸಾಮಾಜಿಕ ಜಾಲತಾಣಗಳಿಂದ ಇಂಥ ಹಲವಾರು ಅದ್ಭುತ ವಿಡಿಯೋಗಳನ್ನು ಸವಿಯುವ ಅವಕಾಶ ಸಿಗುತ್ತಿವೆ.

ಈಗ ವೈರಲ್​ ಆಗಿರುವ ಇಂಥದ್ದೇ ಒಂದು ವಿಡಿಯೋದಲ್ಲಿ, ಮರಿ ನೀರುಗುದುರೆಯೊಂದು (ಹಿಪಪಾಟಮಸ್) ಮೃಗಾಲಯದಲ್ಲಿ ಕಂಬಿಯ ಹಿಂದಿರುವ ಜಿರಾಫೆಯ ಜತೆ ಸ್ನೇಹದಿಂದ ಇರುವುದನ್ನು ಕಾಣಬಹುದಾಗಿದೆ. ಹಿಪ್ಪೋ ಮರಿಯು ಜಿರಾಫೆಯ ಸಮೀಪ ಹೆಜ್ಜೆ ಹಾಕುತ್ತಾ ಬರುವುದು ಹಾಗೂ ಅದನ್ನು ನೋಡಿದಾಗ ತನ್ನ ಮರಿಯೇ ಬಂತೆಂದು ಭಾವಿಸುವ ಜಿರಾಫೆಯು ಅದರ ಮುಖವನ್ನು ನೇವರಿಸುವ ಮನಮಿಡಿಯುವ ವಿಡಿಯೋ ಇದಾಗಿದೆ.

ಮಡಗಾಸ್ಕರ್ ಚಲನಚಿತ್ರವನ್ನು ನೆನಪಿಸಿಕೊಳ್ಳುವಂತೆ ಈ ವಿಡಿಯೋ ಮಾಡಿರುವುದಾಗಿ ಹಲವು ಕಮೆಂಟಿಗರು ತಿಳಿಸಿದ್ದಾರೆ. ಸಿಂಹ ಮತ್ತು ಜೀಬ್ರಾ ಉತ್ತಮ ಸ್ನೇಹಿತರಾಗಿದ್ದು, ಜಿರಾಫೆ ಮತ್ತು ಹಿಪ್ಪೋ ಪರಸ್ಪರ ಪ್ರೀತಿಸುತ್ತಿವೆ. ಅಂತೆಯೇ ಇಲ್ಲಿಯೂ ಹಿಪ್ಪೋ ಮತ್ತು ಜಿರಾಫೆಯ ಸ್ನೇಹಪರತೆಯನ್ನು ಕಾಣಬಹುದಾಗಿದೆ. ಈ ವಿಡಿಯೋ ಇದಾಗಲೇ ಎಂಟು ಲಕ್ಷಕ್ಕೂ ಅಧಿಕ ವ್ಯೂಸ್​ ಕಂಡಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...