ಬಂಗಾಂವ್: ಮೇಕೆಯೊಂದು ಎಂಟು ಕಾಲು ಹಾಗೂ ಎರಡು ಸೊಂಟವಿರುವ ಮರಿಗೆ ಜನ್ಮ ನೀಡಿರುವ ವಿಚಿತ್ರ ಘಟನೆ ಪಶ್ಚಿಮ ಬಂಗಾಳದ ಬಂಗಾಂವ್ ನ ಕಲ್ಮೆಘಾ ಪ್ರದೇಶದಲ್ಲಿ ನಡೆದಿದೆ.
ಸರಸ್ವತಿ ಮೊಂಡಲ್ ಎಂಬಾಕೆಯ ಮನೆಯಲ್ಲಿ ಈ ವಿಚಿತ್ರ ಪ್ರಕರಣ ನಡೆದಿದೆ.
ಮೇಕೆಯೊಂದು ಎರಡು ಮರಿಗಳಿಗೆ ಜನ್ಮ ನೀಡಿತ್ತು. ಅವುಗಳಲ್ಲಿ ಒಂದು ಮರಿಯು ಸಾಮಾನ್ಯವಾಗಿದ್ದರೆ, ಇನ್ನೊಂದು ಮರಿ ಎಂಟು ಕಾಲು ಹಾಗೂ ಎರಡು ಸೊಂಟವನ್ನು ಹೊಂದಿತ್ತು.
ಎಂಟು ಲಕ್ಷದವರೆಗೆ ತೆರಿಗೆ ಉಳಿಸಲು ಇಲ್ಲಿದೆ ಟಿಪ್ಸ್
ದುರದೃಷ್ಟವಶಾತ್ ಜನಿಸಿದ ಕೆಲವೇ ಹೊತ್ತಿನಲ್ಲಿ ಮರಿಯು ಮರಣ ಹೊಂದಿದೆ. ಇನ್ನು ಈ ಸುದ್ದಿ ಎಲ್ಲೆಡೆ ಹಬ್ಬುತ್ತಿದ್ದಂತೆ ಈ ವಿಚಿತ್ರ ಮೇಕೆ ಮರಿಯನ್ನು ನೋಡಲು ಜನಸಾಗರವೇ ಸೇರಿತ್ತು.
ಸರಸ್ವತಿ ಮೊಂಡಾಲ್ ಅವರು ಹಸುಗಳು ಹಾಗೂ ಮೇಕೆಯನ್ನು ಸಾಕುತ್ತಿದ್ದಾರೆ. ‘’ಈ ರೀತಿ ಜನಿಸಿರುವಂತಹ ಮೇಕೆ ಮರಿಯನ್ನು ಇದೇ ಮೊದಲ ಬಾರಿಗೆ ನೋಡಿದ್ದು. ಅದು ಹುಟ್ಟಿದ 5 ನಿಮಿಷದಲ್ಲೇ ಸತ್ತು ಹೋಯಿತು. ಮೇಕೆ ಹಾಗೂ ಇನ್ನೊಂದು ಮರಿ ಆರೋಗ್ಯವಾಗಿದೆ’’ ಎಂದು ಮೊಂಡಾಲ್ ಪ್ರತಿಕ್ರಿಯಿಸಿದ್ದಾರೆ.
ಈ ವರ್ಷದ ಏಪ್ರಿಲ್ ತಿಂಗಳಿನಲ್ಲಿ ಗುಜರಾತ್ ನಲ್ಲಿ ಮಾನವನ ಮುಖದಂತೆ ಹೋಲುವ ವಿಚಿತ್ರ ಮೇಕೆ ಮರಿಯ ಜನನವಾಗಿತ್ತು. ಹುಟ್ಟಿದ 10 ನಿಮಿಷಗಳ ಬಳಿಕ ಆ ಮರಿಯೂ ಸತ್ತು ಹೋಯಿತು. ಈ ಮೇಕೆ ಮರಿಯು ದೇವರಂತೆ ಪೂಜಿಸಲ್ಪಟ್ಟಿತ್ತು. ಜನರು ತಮ್ಮ ಪೂರ್ವಜರ ಪುನರ್ಜನ್ಮ ಅಂತಾನೇ ನಂಬಿದ್ದರು.