ಮಕ್ಕಳಿರುವ ಮನೆಯಲ್ಲಿ ಎಷ್ಟು ಎಚ್ಚರಿಕೆ ತೆಗೆದುಕೊಂಡರೂ ಕೆಲವೊಮ್ಮೆ ತಪ್ಪುಗಳು ನಡೆಯುತ್ತವೆ. ಆದ್ರೆ ಪಾಲಕರ ಟಿವಿ ವೀಕ್ಷಣೆ ಹಾಗೂ ಮೊಬೈಲ್ ಗೇಮ್ ಚಟಕ್ಕೆ ಮಗು ಸಾವನ್ನಪ್ಪಿದ ಘಟನೆ ಇದೇ ಮೊದಲ ಬಾರಿ ನಡೆದಿದೆ ಎಂದ್ರೆ ತಪ್ಪಾಗಲಾರದು. ರಾತ್ರಿ ಪೂರ್ತಿ ಟಿವಿ ನೋಡಿ, ಮೊಬೈಲ್ ಗೇಮ್ ಆಡಿದ ಪಾಲಕರು, ಮಗುವಿನ ಪ್ರಾಣ ತೆಗೆದಿದ್ದಾರೆ.
ಘಟನೆ ಸ್ಕಾಟ್ಲೆಂಡ್ ನಲ್ಲಿ ನಡೆದಿದೆ. ಪಾಲಕರು ರಾತ್ರಿ ಪೂರ್ತಿ ಮೊಬೈಲ್ ಗೇಮ್ ಹಾಗೂ ಟಿವಿ ನೋಡಿದ್ದಾರೆ. ಮರುದಿನ ಮಧ್ಯಾಹ್ನ 3 ಗಂಟೆಗೆ ಹಾಸಿಗೆಯಿಂದ ಎದ್ದಿದ್ದಾರೆ. ನಂತ್ರ ಮಗುವನ್ನು ರೂಮಿನಲ್ಲಿ ಬಿಟ್ಟು ಬೇರೆ ರೂಮಿಗೆ ಹೋಗಿದ್ದಾರೆ. 19 ತಿಂಗಳ ಮಗು ಯಾವಾಗ ಮಂಚದಿಂದ ಬಿದ್ದು ಸಾವನ್ನಪ್ಪಿದೆ ಎಂಬ ಸಂಗತಿ ಅವರಿಗೆ ತಿಳಿದಿಲ್ಲ.
ಪ್ರಕರಣದ ವಿಚಾರಣೆ ಕೋರ್ಟ್ ನಲ್ಲಿ ಪೂರ್ಣಗೊಂಡಿದ್ದು, ಮಗುವಿನ ತಂದೆಗೆ ಜೈಲು ಶಿಕ್ಷೆ ವಿಧಿಸಲಾಗಿದೆ. ತಾಯಿಯನ್ನು ಕೋರ್ಟ್ ಬಿಡುಗಡೆ ಮಾಡಿದೆ. ಉದ್ದೇಶ ಪೂರ್ವಕವಾಗಿ ಮಗುವಿನ ಹತ್ಯೆಗೆ ಇವರು ಮುಂದಾಗಿದ್ದರು ಎನ್ನಲಾಗ್ತಿದೆ. ಮೂರು ದಿನಗಳಿಂದ ಮಗುವಿಗೆ ಯಾವುದೇ ಆಹಾರ ನೀಡಿರಲಿಲ್ಲವಂತೆ. ಮಗು ಸಾವನ್ನಪ್ಪುವ ದಿನ, ಹಾಲು ನೀಡಿದ್ದಾಗಿ ತಾಯಿ ಹೇಳಿದ್ದಾಳೆ. ಆದ್ರೆ ಮರಣೋತ್ತರ ಪರೀಕ್ಷೆಯಲ್ಲಿ ಮಗು, ಮೂರು ದಿನಗಳಿಂದ ಉಪವಾಸವಿತ್ತು ಎಂಬುದು ಗೊತ್ತಾಗಿದೆ.