ಮೆಕ್ಸಿಕೋ: ಈಶಾನ್ಯ ಮೆಕ್ಸಿಕೋದಲ್ಲಿ ಹೆಣ್ಣು ಮಗುವೊಂದು ಜನಿಸಿದ್ದು, ಇದಕ್ಕೆ 2 ಇಂಚು ಉದ್ದದ ಬಾಲವಿರುವ ವಿಚಿತ್ರ ಘಟನೆ ನಡೆದಿದೆ. ಮೆಕ್ಸಿಕೊದಲ್ಲಿ ಈ ಘಟನೆ ನಡೆದಿದೆ. ಶಿಶುವನ್ನು ನೋಡಿ ವೈದ್ಯರು, ನರ್ಸ್‌ಗಳು ಮತ್ತು ಪೋಷಕರು ಆಘಾತಕ್ಕೊಳಗಾಗಿದ್ದಾರೆ.
ಬಾಲವನ್ನು ಹೊರತುಪಡಿಸಿದರೆ ಶಿಶು ಸಂಪೂರ್ಣವಾಗಿ ಆರೋಗ್ಯಕರವಾಗಿದೆ. ತಾಯಿಯ ಗರ್ಭಾವಸ್ಥೆಯಲ್ಲಿ ಯಾವುದೇ ತೊಂದರೆಗಳಿಲ್ಲದಿದ್ದರೂ ಹಾಗೂ ಮಗು ಪೂರ್ಣಾವಧಿಯಲ್ಲಿ ಜನಿಸಿದರೂ ಹೀಗೆ ಆಗಿದೆ ಎಂಬ ಬಗ್ಗೆ ವೈದ್ಯರು ತಲೆಕೆಡಿಸಿಕೊಂಡಿದ್ದಾರೆ.
ವರದಿಗಳ ಪ್ರಕಾರ, ಎರಡು ತಿಂಗಳ ಹಿಂದೆ ನ್ಯೂವೊ ಲಿಯಾನ್‌ನಲ್ಲಿರುವ ಆಸ್ಪತ್ರೆಯಲ್ಲಿ ಸಿಜರಿಯನ್ ಮೂಲಕ ಮಗುವನ್ನು ಹೊರಕ್ಕೆ ತೆಗೆಯಲಾಗಿತ್ತು. ಆಕೆಯ ಹಿಂಬದಿಯಲ್ಲಿ ಬಾಲ ಅಂಟಿಕೊಂಡಿತ್ತು. ಇದು ಆರಂಭದಲ್ಲಿ 5.7-ಸೆಂಟಿಮೀಟರ್ ಉದ್ದವಿತ್ತು. ತುದಿಯು ಚರ್ಮ ಮತ್ತು ಕೂದಲಿನಿಂದ ಮುಚ್ಚಲಾಗಿದೆ. ನಂತರ ಬಾಲ ಬೆಳೆದಿದ್ದು 2 ಇಂಚು ಉದ್ದವಾಗಿದೆ ಎಂದು ವೈದ್ಯರು ವಿವರಿಸಿದ್ದಾರೆ. ಶಸ್ತ್ರಚಿಕಿತ್ಸೆ ಮೂಲಕ ಬಾಲವನ್ನು ತೆಗೆಯಲು ತಯಾರಿ ನಡೆಸಲಾಗಿದೆ.