ಆನೆ ನೋಡಲು ಬಹಳ ದೈತ್ಯ ಪ್ರಾಣಿಯಾಗಿದ್ದರೂ ಸಹ ಇವುಗಳು ಬಹಳ ಮುಗ್ಧ ಜೀವಿಗಳಾಗಿವೆ. ಅದರಲ್ಲೂ ಆನೆಮರಿಗಳ ಆಟವನ್ನು ನೋಡುವುದೇ ಕಣ್ಣಿಗೆ ಹಬ್ಬ. ಇದೀಗ ಇಂಥದ್ದೇ ಒಂದು ಸುಂದರವಾದ ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಹಂಚಿಕೊಂಡಿದ್ದು, ಸದ್ಯ ವೈರಲ್ ಆಗಿದೆ.
ವಿಡಿಯೋದಲ್ಲಿ ಎರಡು ಮರಿ ಆನೆಗಳು ತಮ್ಮ ಪೋಷಕರು ಆಹಾರಕ್ಕಾಗಿ ಪರದಾಡುತ್ತಿದ್ದರೆ, ಇವು ಪರಸ್ಪರ ಆಟವಾಡುತ್ತಿರುವುದನ್ನು ನೋಡಬಹುದು. ಈ ವಿಡಿಯೋವನ್ನು 38,000ಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.
ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ: ಸಹ ಪ್ರಾಧ್ಯಾಪಕ ಸಸ್ಪೆಂಡ್
ವೈರಲ್ ಆಗಿರುವ ವಿಡಿಯೋದಲ್ಲಿ, ಆನೆಗಳ ಗುಂಪು ಆಹಾರಕ್ಕಾಗಿ ಹುಡುಕುತ್ತಾ ಮೇಯುತ್ತಿದೆ. ದೊಡ್ಡಾನೆಗಳು ಮೇಯುತ್ತಿದ್ದರೆ, ಈ ಪುಟ್ಟ ಮರಿಯಾನೆಗಳು ರಸ್ತೆಯ ಮಧ್ಯದಲ್ಲಿ ನಿಂತು ಪರಸ್ಪರ ಆಟವಾಡಿದೆ. ಅವುಗಳ ಮುಗ್ಧತೆಯನ್ನು ನೋಡಿದ್ರೆ ಮನಸೂರೆಗೊಳ್ಳುತ್ತದೆ. ಈ ವಿಡಿಯೋ ನೋಡಿದ್ರೆ ನಿಮ್ಮ ದುಃಖಗಳೆಲ್ಲಾ ಒಂದು ಕ್ಷಣ ಮರೆಯಾಗಿ ನಗು ಮೂಡಿಸುವುದು ಸುಳ್ಳಲ್ಲ.
ದೊಡ್ಡ ಆನೆಗಳು ಆಹಾರ ಹುಡುಕೋದ್ರಲ್ಲಿ ಬ್ಯುಸಿಯಾಗಿದ್ದರೆ, ಅವುಗಳ ಎರಡು ಮರಿಗಳು ಆಟದಲ್ಲಿ ತಲ್ಲೀನವಾಗಿದೆ ಎಂದು ವಿಡಿಯೋಗೆ ಶೀರ್ಷಿಕೆ ನೀಡಿ ಹಂಚಿಕೊಳ್ಳಲಾಗಿದೆ. ನೆಟ್ಟಿಗರು ಈ ವಿಡಿಯೋವನ್ನು ಬಹಳ ಇಷ್ಟಪಟ್ಟಿದ್ದಾರೆ.