ಸಾಮಾಜಿಕ ಜಾಲತಾಣದಲ್ಲಿ ಮುದ್ದು ಆನೆ ಮರಿಯ ವಿಡಿಯೋ ಒಂದು ವೈರಲ್ ಆಗಿದೆ. ದಕ್ಷಿಣ ಆಫ್ರಿಕಾದ ಪ್ರವಾಸಿಗರ ಗುಂಪೊಂದು ವನ್ಯಜೀವಿ ಸಫಾರಿಗೆ ಹೋಗಿತ್ತು. ಈ ಸಮಯದಲ್ಲಿ ದಾರಿ ಮಧ್ಯೆ ಆನೆ ಹಾಗೂ ಅದರ ಮರಿ ಕಾಣಿಸಿಕೊಳ್ಳುತ್ತವೆ. ಆನೆ ಮುಂದೆ ಹೋಗ್ತಿದ್ದರೆ ಆನೆ ಮರಿ ತುಂಟಾಟ ಎಲ್ಲರ ಗಮನ ಸೆಳೆದಿದೆ.
ಒಮ್ಮೆ ಜೀಪಿನ ಕಡೆ ಬರುವ ಆನೆ ಮರಿ ಮತ್ತೆ ವಾಪಸ್ ಹೋಗುತ್ತದೆ. ಹೀಗೆ ಮೂರ್ನಾಲ್ಕು ಬಾರಿ ಆನೆ ಮರಿ ಜೀಪಿನ ಕಡೆ ಬರೋದನ್ನು ನೀವು ನೋಡ್ಬಹುದು. ಆನೆ ಮರಿ ವಿಡಿಯೋ ಹಂಚಿಕೊಂಡವರು ಅದಕ್ಕೆ ಒಂದಿಷ್ಟು ಕ್ಯಾಪ್ಶನ್ ನೀಡಿದ್ದಾರೆ. ಇದನ್ನು ಓದಿದ್ರೆ ನಿಮ್ಮ ಮುಖದಲ್ಲಿ ನಗು ಬರೋದು ನಿಶ್ಚಿತ.
ಆಫ್ರಿಕಾದ ಟ್ಯಾಪ್‌ಸ್ಟ್ರಿ ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಎರಡು ತಿಂಗಳ ವಯಸ್ಸಿನ ಆನೆ ನಮ್ಮ ಮೇಲೆ ದಾಳಿ ಮಾಡಿತು ಎಂದು ಶೀರ್ಷಿಕೆ ಬರೆದು ನಂತ್ರ ಉಪಶೀರ್ಷಿಕೆ ನೀಡಲಾಗಿದೆ.