
ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಮರಿಯಾನೆಯ ಕಣ್ಣಾಮುಚ್ಚಾಲೆ ವಿಡಿಯೋ ನೋಡುಗರನ್ನು ಆಕರ್ಷಿಸಿದೆ. ಈ ವಿಡಿಯೋ ನೋಡಿದ್ರೆ ನಿಮ್ಮ ಭಾನುವಾರದ ದಿನವು ಬಹಳ ಪ್ರಕಾಶಮಾನವಾಗಿರುವುದರಲ್ಲಿ ಸಂಶಯವೇ ಇಲ್ಲ.
ಆನೆಮರಿಯ ಮುದ್ದಾದ ವಿಡಿಯೋವನ್ನು ಶೆಲ್ಡ್ರಿಕ್ ವೈಲ್ಡ್‌ಲೈಫ್ ಟ್ರಸ್ಟ್ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಮರಿ ಆನೆಯೊಂದು ಮರದ ಆವರಣದ ಮೇಲೆ ನೋಡುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಮರಿಯಾನೆಯು ತುಂಬಾ ಚಿಕ್ಕದಾಗಿರುವುದರಿಂದ ಅದಕ್ಕೆ ಆವರಣದ ಬಾಗಿಲನ್ನು ನೋಡಲಾಗುವುದಿಲ್ಲ. ವಿಡಿಯೋ ಮಾಡುತ್ತಿರುವ ವ್ಯಕ್ತಿಯೊಂದಿಗೆ ಮರಿಯಾನೆ ಕಣ್ಣಾಮುಚ್ಚಾಲೆ ಆಟ ಆಡುತ್ತಿರುವಂತೆ ಭಾಸವಾಗುತ್ತದೆ. ತನ್ನ ಸೊಂಡಿಲನ್ನು ಹೊರ ಹಾಕುತ್ತಾ ಬಹಳ ಮುದ್ದಾಗಿ ಕಾಣಿಸಿಕೊಂಡಿದೆ.
ಸದ್ಯ, ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ತರಹೇವಾರಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಮರಿಯಾನೆಯ ಮೋಜಿನ ಕ್ಷಣವನ್ನು ನೋಡಿ ಆನಂದಿಸಿದ್ದು, ಪ್ರೀತಿಯ ಧಾರೆ ಎರೆದಿದ್ದಾರೆ. ಕೆಲವರು ಮರಿಯಾನೆಯನ್ನು ಮುದ್ದಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ.