ಯಾದಗಿರಿ: ಯಾದಗಿರಿ ಜಿಲ್ಲೆ ಶಹಾಪುರದ ಸರ್ಕಾರಿ ಆಸ್ಪತ್ರೆಯಲ್ಲಿ ಗರ್ಭಿಣಿಗೆ ಸಕಾಲಕ್ಕೆ ಚಿಕಿತ್ಸೆ ಸಿಗದೇ ಶಿಶು ಮೃತಪಟ್ಟಿರುವುದಾಗಿ ಆರೋಪಿಸಿ ಮೃತ ಶಿಶುವಿನ ಶವದ ಜೊತೆಗೆ ಬಾಣಂತಿ ತಾಲೂಕು ಆಸ್ಪತ್ರೆ ಎದುರು ಶನಿವಾರ ಪ್ರತಿಭಟನೆ ನಡೆಸಿದ್ದಾರೆ.
ಅ. 28 ರಂದು ಹೆರಿಗೆಗಾಗಿ ಶಹಾಪುರ ತಾಲ್ಲೂಕು ಆಸ್ಪತ್ರೆಗೆ ಬಂದಿದ್ದ ಅಪ್ಸರಾ ಬೇಗಂ ಅವರನ್ನು ಆಸ್ಪತ್ರೆಗೆ ದಾಖಲಿಸಿಕೊಂಡು ಸಂಜೆಯವರೆಗೂ ತಪಾಸಣೆ ಮಾಡಿರಲಿಲ್ಲ. ನರ್ಸ್ ಮತ್ತು ಆರೋಗ್ಯ ಸಹಾಯಕರು ವಿಳಂಬ ಮಾಡಿ ನಂತ ರಾತ್ರಿ ಯಾದಗಿರಿ ಜಿಲ್ಲಾಸ್ಪತ್ರೆಗೆ ಆಂಬುಲೆನ್ಸ್ ನಲ್ಲಿ ಹೆರಿಗೆಗೆ ಕಳುಹಿಸಿದ್ದಾರೆ.
ಅಲ್ಲಿ ಕೂಡ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡಿಲ್ಲ. ನಂತರ ಹೆರಿಗೆ ಮಾಡಿಸಿದ್ದು, ಬಳಿಕ ಶಿಶುವಿಗೆ ಅನಾರೋಗ್ಯವಾಗಿದೆ ಎಂದು ಕಲಬುರ್ಗಿ ಆಸ್ಪತ್ರೆಗೆ ಕಳುಹಿಸಿದ್ದಾರೆ. ಕಲಬುರಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ಮಗು ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಸಮಯ ಪ್ರಜ್ಞೆ ಇಲ್ಲದೆ ಶಿಶುವಿಗೆ ಕಾರಣರಾಗಿದ್ದಾರೆ ಎಂದು ಅಪ್ಸರಾ ಬೇಗಂ ಆರೋಪಿಸಿ ಎಸ್‌ಡಿಪಿಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.