
ಗರ್ಭಿಣಿ ಮಹಿಳೆಯೊಬ್ಬರು ಐಷಾರಾಮಿ ಹಾರ್ಲೆ ಡೇವಿಡ್ಸನ್ ಬೈಕ್ ಓಡಿಸುವ ಮೂಲಕ ಬೇಬಿ ಬಂಪ್ ಫೋಟೋ ಶೂಟ್ ಮಾಡಿಸಿಕೊಂಡಿದ್ದು, ಎಲ್ಲರ ಅಚ್ಚರಿಗೆ ಕಾರಣವಾಗಿದೆ.
ಶಿವಮೊಗ್ಗ ಸಮೀಪದ ಮಾಚೇನಹಳ್ಳಿ ನಿವಾಸಿ ಏಳು ತಿಂಗಳ ಗರ್ಭಿಣಿ ರಕ್ಷಿತಾ ಹೀಗೆ ಫೋಟೋಶೂಟ್ ಮಾಡಿಸಿಕೊಂಡವರಾಗಿದ್ದು, ಇದಕ್ಕೆ ಅವರ ಪತಿ ಮೋಹಿತ್ ಚಕ್ರವರ್ತಿ ಕೂಡ ಬೆಂಬಲವಾಗಿ ನಿಂತಿದ್ದರು.
2018 ರಲ್ಲಿ ಚಿತ್ರದುರ್ಗದಲ್ಲಿ ನಡೆದ ಮಿಸ್ ಕರ್ನಾಟಕ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನು ಮಡಿಗೇರಿಸಿಕೊಂಡಿದ್ದ ರಕ್ಷಿತಾ, ವೃತ್ತಿಪರ ಮಾಡೆಲಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ.
