ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಎರಡು ತಲೆ ಮತ್ತು ಮೂರು ಕೈಗಳಿರುವ ಮಗುವಿಗೆ ಜನ್ಮ ನೀಡಿದ್ದಾರೆ. ಮಗುವನ್ನು ಚಿಕಿತ್ಸೆಗಾಗಿ ಇಂದೋರ್‌ಗೆ ಕಳುಹಿಸಲಾಗಿದೆ.
ಜಾವ್ರಾ ನಿವಾಸಿ ಶಾಹೀನ್ ಎಂಬುವರು ಎರಡು ತಲೆ ಮತ್ತು ಮೂರು ಕೈಗಳಿರುವ ಮಗುವಿಗೆ ಜನ್ಮ ನೀಡಿದ್ದಾರೆ. ಮೂರನೇ ಕೈ ಎರಡು ಮುಖಗಳ ನಡುವೆ ಹಿಂಭಾಗದಲ್ಲಿದೆ. ಮಗುವನ್ನು ರತ್ಲಾಮ್ ನ ಎಸ್.ಎನ್.ಸಿ.ಯು.ನಲ್ಲಿ ಸ್ವಲ್ಪ ಸಮಯದವರೆಗೆ ಇರಿಸಲಾಗಿತ್ತು. ಅಲ್ಲಿಂದ ಮಗುವನ್ನು ಇಂದೋರ್ ಎಂವೈ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೋನೋಗ್ರಫಿಯಲ್ಲಿ ಈ ಮಗು ಅವಳಿಯಂತೆ ಕಾಣುತ್ತದೆ. ಮಗುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ಎಸ್.ಎನ್.ಸಿ.ಯು. ಉಸ್ತುವಾರಿ ಡಾ. ನವೇದ್ ಖುರೇಷಿ ತಿಳಿಸಿದ್ದಾರೆ. ಅಂತಹ ಸಂದರ್ಭದಲ್ಲಿ, ಅನೇಕ ಮಕ್ಕಳು ಗರ್ಭದಲ್ಲಿ ಅಥವಾ ಹುಟ್ಟಿದ 48 ಗಂಟೆಗಳ ಒಳಗೆ ಸಾಯುತ್ತಾರೆ. ಅಂತಹ ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆಗೆ ಒಂದು ಆಯ್ಕೆ ಇದ್ದರೂ. ಆದರೆ, ಇಂತಹ ಶೇ.60ರಿಂದ 70ರಷ್ಟು ಮಕ್ಕಳು ಬದುಕುಳಿಯುವುದಿಲ್ಲ.
ಪ್ರಸ್ತುತ ಮಗುವನ್ನು ಇಂದೋರ್ ಎಂವೈ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಗಿದ್ದು, ತಾಯಿಯನ್ನು ರತ್ಲಾಮ್ ಆಸ್ಪತ್ರೆಯಲ್ಲಿ ಇರಿಸಲಾಗಿದೆ. ಮಗು ವೈದ್ಯರ ಮೇಲ್ವಿಚಾರಣೆಯಲ್ಲಿದೆ.