alex Certify ಪಟಾಪಟ್ಟಿ ಚೆಡ್ಡಿಗೆ 15 ಸಾವಿರ ರೂಪಾಯಿ…..! ಅಂಥದ್ದೇನಿದೆ ಅದ್ರಲ್ಲಿ ಅಂತ ತಲೆಕೆಡಿಸಿಕೊಂಡ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪಟಾಪಟ್ಟಿ ಚೆಡ್ಡಿಗೆ 15 ಸಾವಿರ ರೂಪಾಯಿ…..! ಅಂಥದ್ದೇನಿದೆ ಅದ್ರಲ್ಲಿ ಅಂತ ತಲೆಕೆಡಿಸಿಕೊಂಡ ನೆಟ್ಟಿಗರು

ಸಾಮಾನ್ಯವಾದ ಪಟಾಪಟ್ಟಿ ಚೆಡ್ಡಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸಂಚಲನ ಮೂಡಿಸಿದೆ.

ಅರ್ಷದ್​ ವಾಹಿದ್​ ಎಂಬ ಬಳಕೆದಾರರು ಈ ಚಿತ್ರವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. “ಈ ಪಟ್ಟಾಪಟ್ಟಿ ಪ್ಯಾಂಟ್​ 15 ಸಾವಿರ ಏಕೆ?’ ಎಂದು ಅವರು ಶೀರ್ಷಿಕೆಯಲ್ಲಿ ಬರೆದಿದ್ದಾರೆ.

ನೆಟ್ಟಿಗರನ್ನು ಬೆರಗುಗೊಳಿಸಿರುವ ಸಂಗತಿಯೆಂದರೆ, ದೈನಂದಿನ ಬಳಕೆ ಸಾಮಾನ್ಯ ಬಟ್ಟೆಗೆ ಅಷ್ಟೊಂದು ಬೆಲೆ ಏಕೆ ಎಂಬುದಾಗಿದೆ.

ನೀಲಿ, ಹಸಿರು, ಕೆಂಪು ಬಣ್ಣದ ಪಟ್ಟೆ ಹೊಂದಿರುವ ಚೆಡ್ಡಿ ಮತ್ತು ಶರ್ಟ್​ ಮೇಲೆ ಚೆಕ್ಕರ್​ ಪ್ರಿಂಟ್​ ಇದೆ.

ಜಾಲತಾಣದಲ್ಲಿ ಆ ಚಿತ್ರ ಅಪ್ಲೋಡ್​ ಮಾಡಿದ ನಂತರ, ವೈರಲ್​ ಆಗಿದ್ದು 15,450 ಬೆಲೆಯ ಸಾಮಾನ್ಯ ಜೋಡಿ ಶಾರ್ಟ್ಸ್​ ಜಾಲತಾಣಿಗರನ್ನು ಕಂಗೆಡಿಸಿದೆ. ಇದಷ್ಟೇ ಅಲ್ಲ ಇದರೊಂದಿಗೆ 11,450 ರೂಪಾಯಿ ಮೌಲ್ಯದ ಶರ್ಟ್ ಕೂಡ ಇದೆ.

ಈ ಹಿಂದೆ, ಅಮೆಜಾನ್​ನಲ್ಲಿ 25,999 ರೂಪಾಯಿ ಬೆಲೆಯ ಸಾಮಾನ್ಯ ಪ್ಲಾಸ್ಟಿಕ್​ ಬಕೆಟ್​ ಗ್ರಾಹಕರನ್ನು ಕಂಗೆಡಿಸಿತ್ತು. ಟ್ವಿಟ್ಟರ್​ ಬಳಕೆದಾರರು ವಿಲಕ್ಷಣವಾದ ಬೆಲೆಯನ್ನು ಹಾಕಿದ ನಂತರ ಇದು ಸಂಭವಿಸಿದೆ.

ಈ ಬೆಲೆಯು ಕೈ ತಪ್ಪಿ ಹಾಕಲಾಗಿದೆಯೋ ಅಥವಾ ಯಂತ್ರ ದೋಷದ ಪರಿಣಾಮವಾಗಿದೆಯೇ ಎಂದು ನೆಟ್ಟಿಗರು ಯೋಚಿಸಿದ್ದಾರೆ. ಅದರ ಬೆಲೆಯನ್ನು ಸಮರ್ಥಿಸಲು ಬಕೆಟ್​ನಲ್ಲಿ ವಿಶೇಷತೆ ಏನಿರಬೇಕು ಎಂಬುದರ ಕುರಿತು ಮಿಮ್​ಗಳು ಜೋಕ್​ಗಳು ಹುಟ್ಟಿಕೊಂಡಿದ್ದವು.

https://twitter.com/earendil_1/status/1553361850980798464?ref_src=twsrc%5Etfw%7Ctwcamp%5Etweetembed%7Ctwterm%5E1553361850980798464%7Ctwgr%5Ea5afe7bb2a14943875f46fb8fc5

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...