ಯೋಗ ಗುರು ಬಾಬಾ ರಾಮದೇವ್ ಅವರು ಆರೋಗ್ಯ ಸಮಸ್ಯೆಗಳಿಗೆ ‘ಪರ್ಯಾಯ’ ಪರಿಹಾರಗಳನ್ನು ನೀಡುವ ಮೂಲಕ ಜನಪ್ರಿಯವಾಗಿದ್ದಾರೆ. ಪತಂಜಲಿ ಉತ್ಪನ್ನಗಳು ಮತ್ತು ಜೀವನಶೈಲಿ ಸಮಸ್ಯೆಗಳಿಗೆ ಆಯುರ್ವೇದ ಚಿಕಿತ್ಸೆಗೆ ಹೆಸರುವಾಸಿಯಾದ ರಾಮ್’ದೇವ್ ಕೆಲವು ವಿವಾದಕ್ಕೂ ಗುರಿಯಾಗಿದ್ದಾರೆ.
ಇದೀಗ, ಬಾಬಾ ರಾಮ್ ದೇವ್ ಅವರು ಕತ್ತೆಯ ಹಾಲು ಕರೆದು ಕುಡಿದಿದ್ದು, ವಿಡಿಯೋ ವೈರಲ್ ಆಗಿದೆ. ಬಾಬಾ ರಾಮದೇವ್ ಕತ್ತೆ ಹಾಲು ಕುಡಿಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಜನರು ಹೆಚ್ಚಾಗಿ ಹಸು ಅಥವಾ ಎಮ್ಮೆ ಹಾಲನ್ನು ಸೇವಿಸುತ್ತಾರೆ ಅಥವಾ ಕೆಲವರು ಮೇಕೆ ಹಾಲನ್ನು ಸೇವಿಸುತ್ತಾರೆ, ವೀಡಿಯೊದಲ್ಲಿ, ಯೋಗ ಗುರು ಮೊದಲು ಕತ್ತೆ ಹಾಲು ಕರೆಯುವುದನ್ನು ಮತ್ತು ನಂತರ ಹೊರತೆಗೆದ ಹಾಲನ್ನು ಕುಡಿಯುವುದನ್ನು ಕಾಣಬಹುದು.
”ನಾನು ನನ್ನ ಜೀವನದಲ್ಲಿ ಮೊದಲ ಬಾರಿಗೆ ಕತ್ತೆ ಹಾಲನ್ನು ಹೊರತೆಗೆಯುತ್ತಿದ್ದೇನೆ. ನಾನು ಒಂಟೆ, ಹಸು, ಕುರಿ ಮತ್ತು ಮೇಕೆಗಳಿಂದ ಹಾಲನ್ನು ಹೊರತೆಗೆದಿದ್ದೇನೆ. ಹಾಲು ಸೂಪರ್ ಟಾನಿಕ್ ಮತ್ತು ಸೂಪರ್ ಕಾಸ್ಮೆಟಿಕ್ ಆಗಿ ಕಾರ್ಯನಿರ್ವಹಿಸುತ್ತದೆ” ಎಂದು ರಾಮ್’ದೇವ್ ಹೇಳಿದರು.
स्वामी रामदेव ने पिया गधी का दूध !
■ गधी के दूध को गाय-भैंस और ऊँटनी के दूध से ज्यादा टेस्टी और ताकतवर बताया।🤦🏻@yogrishiramdev #BabaRamdev
pic.twitter.com/TLKjv0GMx6— संजीत कुमार (@sanjeetkumaar4) December 3, 2024