26 ವರ್ಷಗಳ ಹಿಂದೆ ಇಹಲೋಕ ತ್ಯಜಿಸಿರುವ ಬಲ್ಗೇರಿಯಾ ಮೂಲದ ಬಾಬಾ ವಂಗಾ ನಿಖರ ಭವಿಷ್ಯಕ್ಕೆ ಹೆಸರಾದವರು. ಈ ಹಿಂದೆ ಅವರು ಹೇಳಿದ್ದ 9/11 ರ ಅಮೆರಿಕ ಅವಳಿ ಗೋಪುರ ಸ್ಪೋಟ ಮತ್ತು ಬ್ರೆಕ್ಸಿಟ್ ಭವಿಷ್ಯವಾಣಿಗಳು ನಿಜವಾಗಿವೆ. ಇದೀಗ ಅವರು ಭಾರತದ ಕುರಿತು ಹೇಳಿರುವ ಭವಿಷ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
2022 ರಲ್ಲಿ ಭಾರತ ಇನ್ನಿಲ್ಲದಂತಹ ಪ್ರಾಕೃತಿಕ ವಿಕೋಪ ಎದುರಿಸಲಿದ್ದು, ಇದರ ಪರಿಣಾಮ ಬರಗಾಲದ ಛಾಯೆ ಆವರಿಸಲಿದೆ ಎನ್ನಲಾಗಿದೆ. ಮಿಡತೆಗಳ ದೊಡ್ಡ ಹಿಂಡು ಬೆಳೆಗಳನ್ನು ನಾಶಪಡಿಸುತ್ತದೆ ಎನ್ನಲಾಗಿದ್ದು, ಒಂದು ವೇಳೆ ಈ ಭವಿಷ್ಯವೂ ನಿಜವಾದರೆ ಇದರಿಂದ ಬರ ಪರಿಸ್ಥಿತಿ ಎದುರಾಗಬಹುದು ಎಂಬ ಆತಂಕ ಮನೆ ಮಾಡಿದೆ.
2020 ರಲ್ಲಿ ಮಿಡತೆಗಳ ದಂಡು ರಾಜಸ್ಥಾನ, ಗುಜರಾತ್ ಹಾಗೂ ಮಧ್ಯಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ಬೆಳೆಯನ್ನು ನಾಶ ಮಾಡಿದ್ದು, 2022 ರಲ್ಲಿ ಇದು ಇನ್ನಷ್ಟು ಹೆಚ್ಚಲಿದೆ ಎನ್ನಲಾಗಿದೆ. ಇದರ ಜೊತೆಗೆ ವಿಶ್ವದ ಉಷ್ಣಾಂಶದಲ್ಲಿ ಗಣನೀಯ ಮಟ್ಟದ ಕುಸಿತವಾಗಲಿದೆ ಎಂದು ಬಾಬಾ ವಂಗಾ ಹೇಳಿದ್ದಾರೆ.
1911 ರಲ್ಲಿ ಬಲ್ಗೇರಿಯಾದಲ್ಲಿ ಜನಿಸಿದ ಬಾಬಾ ವಂಗಾ 26 ವರ್ಷಗಳ ಹಿಂದೆ ನಿಧನ ಹೊಂದಿದ್ದಾರೆ. ಆದರೆ ಅವರು 5079ರ ವರೆಗೆ ಭವಿಷ್ಯ ವಾಣಿ ನುಡಿದಿದ್ದು, ಅದು ವಿಶ್ವದ ಅಂತಿಮ ದಿನ ಎಂದು ಹೇಳಲಾಗುತ್ತದೆ. ತಮ್ಮ 12ನೇ ವಯಸ್ಸಿನಲ್ಲಿ ಕಣ್ಣು ಕಳೆದುಕೊಂಡ ಅವರು, ವಿಶ್ವದಲ್ಲಿ ಮುಂದೆ ಸಂಭವಿಸಲಿರುವ ಘಟನಾವಳಿಗಳ ಮುನ್ಸೂಚನೆ ನೀಡಿದ್ದಾರೆ.
ಸೋವಿಯತ್ ಒಕ್ಕೂಟ ಛಿದ್ರಗೊಂಡಿದ್ದು, 2004ರಲ್ಲಿ ರಾಜಕುಮಾರಿ ಡಯಾನ ದುರ್ಮರಣ, ಥಾಯ್ಲ್ಯಾಂಡ್ ಸುನಾಮಿ, ಅಮೆರಿಕ ಅಧ್ಯಕ್ಷರಾಗಿ ಬರಾಕ್ ಒಬಾಮಾ ಮೊದಲಾದವುಗಳನ್ನು ಬಾಬಾ ವಂಗಾ ಮೊದಲೇ ಊಹಿಸಿದ್ದು ಅವುಗಳೆಲ್ಲವೂ ನಿಜವಾಗಿವೆ. ಇದೀಗ ಅವರು ಭಾರತದ ಕುರಿತು ನುಡಿದಿರುವ ಭವಿಷ್ಯ ಆತಂಕಕ್ಕೆ ಕಾರಣವಾಗಿದೆ.