ಬೆಳಗಾವಿ: ಬಾಬಾ ರಾಮ್ ದೇವ್ ಸ್ವಾಮೀಜಿ ಅಲ್ಲ, ಅವನೊಬ್ಬ ಬ್ಯುಸಿನೆಸ್ ಮ್ಯಾನ್ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ವಿಧಾನ ಪರಿಷತ್ ನಲ್ಲಿ ವಿಶ್ವಕರ್ಮ ಸಮುದಾಯದ ಜಯಂತಿಗೆ ಸರ್ಕಾರ ಆಸಕ್ತಿ ತೋರಿಸುತ್ತಿಲ್ಲ ಎಂದು ಬಿಜೆಪಿ ಸದಸ್ಯ ಕೆ.ಪಿ. ನಂಜುಂಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ ವಿಪಕ್ಷ ನಾಯಕ ಹರಿಪ್ರಸಾದ್, ರಾಜ್ಯ ಸರ್ಕಾರ ಬೇರೆ ಬೇರೆ ಸಮುದಾಯಕ್ಕೆ ಅನುದಾನ ನೀಡುವುದಿಲ್ಲ. ಆದರೆ, ಯಾವನೋ ಜಗ್ಗಿ ವಾಸುದೇವ್ ಗೆ 100 ಕೋಟಿ ರೂ. ನೀಡುತ್ತದೆ. ಜಗ್ಗಿ ವಾಸುದೇವ್ ಯಾರ್ರೀ? ಯಾರ್ರೀ ಅವನು ಬಾಬಾ ರಾಮದೇವ್ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿ.ಕೆ. ಹರಿಪ್ರಸಾದ್ ಹೇಳಿಕೆಗೆ ಬಿಜೆಪಿಯ ರವಿಕುಮಾರ್ ಮತ್ತು ತೇಜಸ್ವಿನಿ ಕಿಡಿಕಾರಿದ್ದಾರೆ. ಸ್ವಾಮೀಜಿ ಬಗ್ಗೆ ಅವನು ಇವನು ಎನ್ನುವುದು ಸರಿಯಲ್ಲವೆಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹೌದು, ಬಾಬಾ ರಾಮ್ ದೇವ್ ಮಹಿಳೆಯರಿಗೆ ಅವಮಾನ ಮಾಡಿದವನು. ಅವನು ಸ್ವಾಮೀಜಿನಾ ಎಂದು ಹರಿಪ್ರಸಾದ್ ಪ್ರಶ್ನಿಸಿದ್ದಾರೆ.