ದೇಶದ ನೆಟ್ಟಿಗರ ಗಮನವನ್ನು ಸೂಜಿಗಲ್ಲಿನಂತೆ ಸೆಳೆದ ದೆಹಲಿಯ ಮಾಳ್ವಿಯಾನಗರದ ’ಬಾಬಾ ಕಾ ಡಾಬಾ’ ಪ್ರಸಂಗವು ಸುಖಾಂತ್ಯ ಕಂಡಿದೆ.
ಕೋವಿಡ್ ಲಾಕ್‌ಡೌನ್ ಕಾರಣದಿಂದ ವ್ಯಾಪಾರವಿಲ್ಲದೇ ಪರದಾಡುತ್ತಿದ್ದ ವೇಳೆ ತನ್ನ ನೆರವಿಗೆ ಬಂದ ಯೂಟ್ಯೂಬರ್ ಗೌರವ್ ವಾಸನ್‌ಗೆ ಬಾಬಾ ಕಾ ಡಾಬಾದ ಮಾಲೀಕ ಕಾಂತಾ ಪ್ರಸಾದ್ ಕ್ಷಮೆಯಾಚಿಸಿದ್ದಾರೆ.
ಕಾಂತಾ ಪ್ರಸಾದ್ ಹಾಗೂ ಆತನ ಪತ್ನಿ ಬದಾಮಿ ದೇವಿ ಸೇರಿಕೊಂಡು ರಸ್ತೆ ಬದಿಯಲ್ಲಿ ನಡೆಸುತ್ತಿದ್ದ ಪುಟ್ಟದೊಂದು ಡಾಬಾದಲ್ಲಿ ಲಾಕ್‌ಡೌನ್ ಕಾರಣದಿಂದ ವ್ಯಾಪಾರವಿಲ್ಲದೇ ಈ ಹಿರಿಯ ದಂಪತಿ ಕಣ್ಣೀರಿಡುತ್ತಿರುವ ಮನಕಲಕುವ ದೃಶ್ಯವನ್ನು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತೋರಿಸಿ, ಇಬ್ಬರಿಗೂ ಸಾರ್ವಜನಿಕರಿಂದ ದೇಣಿಗೆ ಸಂಗ್ರಹವಾಗುವಂತೆ ಮಾಡಿದ್ದರು ವಾಸನ್.
ವಿಡಿಯೋದಲ್ಲಿ ಮೊಸಳೆ ಎಲ್ಲಿದೆ ಎಂಬುದನ್ನು ಗುರುತಿಸಬಲ್ಲಿರಾ….?
ದೊಡ್ಡ ಮಟ್ಟದಲ್ಲಿ ನೆರವಿನ ಹಣ ಹರಿದು ಬಂದ ಬಳಿಕ, ವಾಸನ್ ವಿರುದ್ಧ ತಿರುಗಿ ಬಿದ್ಧಿದ್ದ ಕಾಂತಾ ಪ್ರಸಾದ್, ಆತನ ವಿರುದ್ಧ ಕೇಸ್ ಹಾಕಿದ್ದಲ್ಲದೇ, “ನಾನೇನು ಆತನಿಗೆ ಬಂದು ಸಹಾಯ ಮಾಡು ಎಂದಿರಲಿಲ್ಲ” ಎಂದು ಹೇಳಿದ್ದು ವೈರಲ್ ಆಗಿ ನೆಟ್ಟಿಗರು ಆತನನ್ನು ಶಪಿಸುತ್ತಿದ್ದರು.
46 ವರ್ಷಗಳ ಬಳಿಕ ಸಿಕ್ತು ಕಳೆದುಕೊಂಡಿದ್ದ ಉಂಗುರ…!
ಕಳೆದ ಡಿಸೆಂಬರ್‌ನಲ್ಲಿ ಇಂಡಿಯನ್-ಚೈನೀಸ್ ರೆಸ್ಟೋರೆಂಟ್ ಒಂದನ್ನು ತೆರೆದಿದ್ದ ಕಾಂತಾ ಪ್ರಸಾದ್‌ಗೆ ವ್ಯಾಪಾರ ಸರಿಯಾಗಿ ನಡೆಯದೇ ಇದ್ದ ಕಾರಣ ಫೆಬ್ರವರಿಯಲ್ಲಿ ಹೊಸ ರೆಸ್ಟೋರೆಂಟ್ ಮುಚ್ಚಬೇಕಾಗಿ ಬಂದಿತ್ತು.
ಇದೀಗ ಮರಳಿ ತಮ್ಮ ಹಳೆಯ ಜಾಗಕ್ಕೆ ಬಂದ ಕಾಂತಾ ಪ್ರಸಾದ್, ತಮ್ಮ ವರ್ತನೆಗೆ ಕ್ಷಮೆಯಾಚಿಸಿದ್ದು, “ಗೌರವ್‌ಗೆ ನಾನು ಹಾಗೆ ಹೇಳಬಾರದಿತ್ತು. ನನ್ನ ಮಾತಿಗೆ ಕ್ಷಮೆಯಾಚಿಸುತ್ತೇನೆ” ಎಂದಿದ್ದಾರೆ.