ಮೆಟ್ರೋ ಇರುವುದು ಯಾವುದೇ ಟ್ರಾಫಿಕ್ ಕಿರಿಕಿರಿ ಇಲ್ಲದೇ ಆರಾಮದಾಯಕವಾಗಿ ಪ್ರಯಾಣ ಮಾಡಲಿ ಎಂದು. ಆದರೆ ಇತ್ತೀಚಿಗೆ ಮೆಟ್ರೋದಲ್ಲಿ ಒಂದಿಲ್ಲೊಂದು ಪ್ರಕರಣಗಳು ವರದಿಯಾಗುತ್ತಲೇ ಇದೆ. ದೆಹಲಿ ಮೆಟ್ರೋದಲ್ಲಿ ಪ್ರೇಮಿಗಳಿಬ್ಬರು ಖುಲ್ಲಂ ಖುಲ್ಲಾ ರೊಮ್ಯಾನ್ಸ್ ಮಾಡಿದ್ದು ಇದನ್ನುನೋಡಿದ ಮಹಿಳೆ ಗರಂ ಆಗಿದ್ದು ಮಾತ್ರವಲ್ಲದೇ ಪ್ರೇಮಿಗಳಿಗೆ ಝಾಡಿಸಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮಹಿಳೆ ವರ್ತನೆ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗ್ತಿದೆ.
ಒಬ್ಬರಿಗೊಬ್ಬರ ಕೆನ್ನೆ ಹಿಂಡಿಕೊಳ್ಳುತ್ತಾ, ಕೈ ಕೈ ಹಿಡಿದು ಮಜಾ ಮಾಡ್ತಿದ್ದ ಪ್ರೇಮಿಗಳನ್ನು ಅದೇ ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ತರಾಟೆಗೆ ತೆಗೆದುಕೊಂಡಿದ್ದಾರೆ. ನಿಮ್ಮ ಪ್ರೀತಿಯನ್ನ ಮೆಟ್ರೋದ ಹೊರಗೆ ಇಟ್ಟುಕೊಳ್ಳಿ. ಉಳಿದ ಪ್ರಯಾಣಿಕರ ಎದುರು ನಿಮ್ಮ ಪ್ರೀತಿ ಪ್ರದರ್ಶನ ಮಾಡುವ ಅಗತ್ಯವಿಲ್ಲ ಅಂತಾ ಕ್ಲಾಸ್ ತೆಗೆದುಕೊಂಡಿದ್ದಾರೆ.
ಇನ್ನು ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆಯೇ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಮಹಿಳೆ ಮಾಡಿದ್ದು ಸರಿ ಇದೆ ಎಂದು ಹೇಳಿದ್ರೆ, ಇನ್ನೂ ಕೆಲವರು ಪ್ರೇಮಿಗಳಿಗೆ ಕೈ ಕೈ ಹಿಡಿದುಕೊಂಡು ನಿಲ್ಲುವ ಸ್ವಾತಂತ್ರ್ಯ ಕೂಡ ಇಲ್ವಾ ಅಂತಾ ಪ್ರಶ್ನೆ ಮಾಡ್ತಿದ್ದಾರೆ. ಅಂದಹಾಗೆ ಈ ಘಟನೆ ಬಗ್ಗೆ ನಿಮ್ಮ ಅಭಿಪ್ರಾಯವೇನು..?