ಬೆಂಗಳೂರು: ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜಧಾನಿ ಹೊರತುಪಡಿಸಿ ಉಳಿದೆಡೆ ಸ್ವತ್ತುದಾರರಿಗೆ ನೆಮ್ಮದಿ ಸುದ್ದಿ ನೀಡಿದೆ. ಬಿ ಖಾತೆ ಸ್ವತ್ತುಗಳನ್ನು ಎರಡು ತಿಂಗಳಲ್ಲಿ ಎ ಖಾತೆಗೆ ಬದಲಾಯಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎ. ಬಸವರಾಜ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಅಕ್ರಮ ಸಕ್ರಮ ವಿಚಾರ ಸುಪ್ರೀಂ ಕೋರ್ಟ್ ನಲ್ಲಿದ್ದು, ಬೆಂಗಳೂರು ಹೊರತುಪಡಿಸಿ ಉಳಿದ ನಗರಗಳಲ್ಲಿ ಬಿ ಖಾತೆಗಳನ್ನು ಎ ಖಾತೆಗಳಾಗಿ ಬದಲಾಯಿಸಲಾಗುತ್ತದೆ. ಸುಮಾರು 10 ಲಕ್ಷ ಬಿ ಖಾತೆಗಳು ಇರುವ ಅಂದಾಜಿದ್ದು, ಇವುಗಳಿಗೆ ತೆರಿಗೆ ನಿಗದಿಯಾದರೆ ನಗರ ಸ್ಥಳೀಯ ಸಂಸ್ಥೆಗಳಿಗೆ ಕನಿಷ್ಠ 150 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ ಎಂದರು.