ಬೆಂಗಳೂರು: ಯಾವಾಗ ಸಚಿವರು, ಶಾಸಕರು ಊಟಕ್ಕೆ ಸೇರಿದರೋ ಆಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಆಟ ಪ್ರಾರಂಭವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿಡ ಬಿ.ವೈ.ವಿಜಯೇಂದ್ರ ಅಧಿಕಾರ ಸಿಕದಿದ್ದರೆ ಒದ್ದು ಕಿತ್ತುಕೊಳ್ಳಬೇಕೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ರು. ಡಿ.ಕೆ.ಮಾತಿನ ಮರ್ಮ ಏನೆಂದು ಅರ್ಥ ಮಾಡಿಕೊಳ್ಳಬೇಕು. ಪವರ್ ಶೇರಿಂಗ್ ಫಾರ್ಮುಲಾ ಏನಿದೆ ಎಂದು ಅವರೇ ಹೇಲಬೇಕು. ಅಧಿಕಾರ ಕಿತ್ತುಕೊಳ್ಳುವ ಪ್ರಯತ್ನವನ್ನು ಡಿ.ಕೆ ಮುಂದುವರೆಸುತ್ತಾರೆ ಎಂದರು.
ನಮಗಿರುವ ಮಾಹಿತಿ ಪ್ರಕಾರ ಸಿಎಂ ಸಿದ್ದರಾಮಯ್ಯ ಅವರ ಅವಧಿ ಮುಗಿಯುತ್ತಿದೆ. ಅಧಿಕಾರ ಕಿತ್ತುಕೊಳ್ಳಬೇಕು ಎನ್ನುವ ದಾಳವನ್ನು ಪ್ರಯೋಗಿಸಲಾಗುತ್ತಿದೆ. ಬರುವ ದಿನಗಳಲ್ಲಿ ಕಾಂಗ್ರೆಸ್ ಕಿತ್ತಾಟ ಬೀದಿಗೆ ಬರಲಿದೆ. ಹೈಕಮಾಂಡ್ ಸೂಚಿಸಿದರೂ ಡಿನ್ನರ್ ಪಾಲಿಟಿಕ್ಸ್ ನಿಲ್ಲಲ್ಲ, ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.