ಬೆಂಗಳೂರು: ಸಾರಿಗೆ ನೌಕರರ ಮರು ನೇಮಕಾತಿಗೆ ಚಾಲನೆ ನೀಡಲಾಗಿದೆ ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ತಿಳಿಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಮುಷ್ಕರ ಕೈಗೊಂಡು ವಜಾಗೊಂಡಿದ್ದ ಸಾರಿಗೆ ನೌಕರರ ನೇಮಕಾತಿಗೆ ಚಾಲನೆ ನೀಡಲಾಗಿದೆ. ಮುಖ್ಯಮಂತ್ರಿ ಅವರ ಸೂಚನೆ ಮೇರೆಗೆ ವಜಾಗೊಂಡ ಸಾರಿಗೆ ನೌಕರರ ನೇಮಕಾತಿಗೆ ಚಾಲನೆ ನೀಡಲಾಗಿದೆ. 1610 ಸಿಬ್ಬಂದಿ ಮುಷ್ಕರ ನಡೆಸಿ ಕಳೆದುಕೊಂಡಿದ್ದರು. ಗುರುವಾರ 100 ಸಿಬ್ಬಂದಿಗೆ ಮರು ನೇಮಕಾತಿ ಆದೇಶ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.