ಬೆಂಗಳೂರು: ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಮೊಮ್ಮಗಳು ಡಾ. ಸೌಂದರ್ಯ ಅಂತ್ಯಕ್ರಿಯೆ ನೀರಜ್ ಫಾರ್ಮ್ ಹೌಸ್ ನಲ್ಲಿ ವೀರಶೈವ-ಲಿಂಗಾಯತ ಸಂಪ್ರದಾಯದಂತೆ ನೆರವೇರಿದೆ.
ಸೌಂದರ್ಯ ಮಣ್ಣಲ್ಲಿ ಮಣ್ಣಾಗಿದ್ದಾರೆ. ಮೊಮ್ಮಗಳನ್ನು ನೆನೆದು ಯಡಿಯೂರಪ್ಪ ಸೇರಿದಂತೆ ಕುಟುಂಬ ವರ್ಗದವರು ಕಣ್ಣೀರಿಟ್ಟಿದ್ದಾರೆ. ಬೆಳಿಗ್ಗೆ ಸಾವಿಗೆ ಶರಣಾಗಿದ್ದ ಸೌಂದರ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಲಾಗಿತ್ತು.
ಬೆಂಗಳೂರು ಉತ್ತರ ತಾಲೂಕಿನ ಅಬ್ಬಿಗೆರೆಯಲ್ಲಿರುವ ಪತಿ ನೀರಜ್ ಫಾರ್ಮ್ ಹೌಸ್ ನಲ್ಲಿ ರುದ್ರಮುನಿ ಸ್ವಾಮೀಜಿ ಸಮ್ಮುಖದಲ್ಲಿ ಅಂತಿಮ ವಿಧಿವಿಧಾನ ನೆರವೇರಿಸಲಾಗಿದೆ. ಸೌಂದರ್ಯ ಮಣ್ಣಲ್ಲಿ ಮಣ್ಣಾಗಿದ್ದಾರೆ. ಬಿ.ಎಸ್.ವೈ. ಸೇರಿದಂತೆ ಕುಟುಂಬಸ್ಥರು ಮಗಳನ್ನು ಕಳೆದುಕೊಂಡು ಕಣ್ಣೀರಿಟ್ಟಿದ್ದಾರೆ.