ಎಲ್ಲರ ಅಡುಗೆ7 ಮನೆಯಲ್ಲಿಯೂ ನಿಂಬೆ ಇದ್ದೇ ಇರುತ್ತದೆ. ವಿಟಮಿನ್ ಸಿಯಿಂದ ತುಂಬಿರುವ ನಿಂಬೆ ಹಣ್ಣಿನಿಂದ ಸಾಕಷ್ಟು ಪ್ರಯೋಜನಗಳಿವೆ. ಆರೋಗ್ಯ ವೃದ್ಧಿಯಿಂದ ಹಿಡಿದು ಸೌಂದರ್ಯ ವರ್ಧಕವಾಗಿ ಇದು ಕೆಲಸ ಮಾಡುತ್ತದೆ. ಕೆಲವೊಂದು ಪವಾಡದ ಕೆಲಸಗಳನ್ನು ಇದು ಮಾಡುತ್ತೆ ಎಂದ್ರೆ ತಪ್ಪಾಗಲಾರದು.
ರಕ್ತದೊತ್ತಡ : ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿರುವವರು ರಾತ್ರಿ ಮಗಲುವ ವೇಳೆ ಬೆಡ್ ಬಳಿ ನಿಂಬೆ ಹೋಳನ್ನಿಟ್ಟು ಮಲಗಬೇಕು. ಬೆಳಿಗ್ಗೆ ಸುಸ್ತು ದೂರವಾಗಿ ಫ್ರೆಶ್ ಮುಂಜಾವು ನಿಮ್ಮನ್ನು ಸ್ವಾಗತಿಸುತ್ತದೆ. ನಿಂಬೆ ಹಣ್ಣಿನ ಸುವಾಸನೆ ಇದಕ್ಕೆ ಕಾರಣ.
ನಿದ್ರಾಹೀನತೆ : ಒತ್ತಡದ ಜೀವನದಲ್ಲಿ ಅನೇಕರು ನಿದ್ರಾಹೀನತೆ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ರಾತ್ರಿ ಸರಿಯಾಗಿ ನಿದ್ರೆ ಬರದಿದ್ದಲ್ಲಿ ಮಾನಸಿಕ ಹಾಗೂ ದೈಹಿಕ ಸಮಸ್ಯೆ ಕಾಡಲು ಶುರುವಾಗುತ್ತದೆ. ನಿದ್ರಾಹೀನತೆ ಇರುವವರು ಹಾಸಿಗೆ ಬಳಿ ನಿಂಬೆ ಹೋಳನ್ನಿಟ್ಟು ಮಲಗಿ. ಮನಸ್ಸು ಶಾಂತವಾಗಿ ಸುಖ ನಿದ್ರೆ ನಿಮ್ಮನ್ನಾವರಿಸುತ್ತದೆ.
ಸೊಳ್ಳೆ : ಸಣ್ಣ ಪುಟ್ಟ ಕೀಟ ಹಾಗೂ ಸೊಳ್ಳೆಯನ್ನು ಓಡಿಸಲು ನಿಂಬೆ ಹಣ್ಣು ಬೆಸ್ಟ್. ಹಾಸಿಗೆಗೆ ಹೋಗುವ ಸ್ವಲ್ಪ ಮೊದಲು ನಿಂಬೆ ಹೋಳನ್ನು ಹಾಸಿಗೆ ಪಕ್ಕವಿಟ್ಟು ಲೈಟ್ ಆರಿಸಿ. ನಿಂಬೆ ವಾಸನೆಗೆ ಸೊಳ್ಳೆಗಳು ಓಡಿ ಹೋಗುತ್ತವೆ.
ಭಯ : ಅತಿಯಾದ ಒತ್ತಡ ಭಯ ಹುಟ್ಟಿಸುತ್ತದೆ. ಭಯದಿಂದಾಗಿ ಕೆಲವರು ರಾತ್ರಿ ಸರಿಯಾಗಿ ನಿದ್ರೆ ಮಾಡುವುದಿಲ್ಲ. ಅಂತವರು ಕೂಡ ಈ ನಿಂಬೆ ಹೋಳನ್ನು ಹಾಸಿಗೆ ಬಳಿಯಿಟ್ಟು ಮಲಗಿದ್ರೆ ಭಯವಿಲ್ಲದೆ ಕಣ್ಣುಮುಚ್ಚಿ ಮಲಗಬಹುದು.