![](https://kannadadunia.com/wp-content/uploads/2023/09/pranavananda-swmiji.jpg)
ಬೆಂಗಳೂರು: ರಾಜ್ಯದಲ್ಲಿ ಸಿಎಂ ಸ್ಥಾನಕ್ಕಾಗಿ ಬೇಡೆಕೆ ಹೆಚ್ಚಾಗಿದ್ದು, ರಾಜಕಾರಣಿಗಳಿಗಿಂತ ಹಲವು ಸಮುದಾಯಗಳ ಸ್ವಾಮೀಜಿಗಳು ಈ ನಿಟ್ಟಿನಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದಾರೆ.
ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಸಿಎಂ ಸ್ಥಾನ ಬಿಟ್ಟುಕೊಡುವಂತೆ ಒಕ್ಕಲಿಗ ಮಹಾಸಂಸ್ಥಾನ ಮಠದ ಸ್ವಾಮೀಜಿ ಚಂದ್ರಶೇಖರ ಸ್ವಾಮೀಜಿ ಸಿಎಂ ಸಿದ್ದರಾಮಯ್ಯಗೆ ನೇರವಾಗಿ ಹೇಳಿದ್ದರು. ಇದರ ಬೆನ್ನಲ್ಲೇ ಶ್ರೀಶೈಲ ಪೀಠದ ಜಗದ್ಗುರುಗಳು ಸಿಎಂ ಹುದ್ದೆ ಬದಲಾವಣೆಯಾದರೇ ವೀರಶೈವ ಲಿಂಗಾಯಿತರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಹೇಳಿದ್ದರು.
ಇದರ ಬೆನ್ನಲ್ಲೇ ಇದೀಗ ಬ್ರಹ್ಮಶ್ರೀ ನಾರಾಯಣಗುರುಪೀಠದ ಪ್ರಣವಾನಂದ ಸ್ವಾಮೀಜಿ, ಬಿ.ಕೆ.ಹರಿಪ್ರಸಾದ್ ಗೆ ಸಿಎಂ ಸ್ಥಾನ ಕೊಡಬೇಕು ಎಂದಿದ್ದಾರೆ. ರಾಜ್ಯದಲ್ಲಿ ಒಂದುವೇಳೆ ಸಿಎಂ ಸ್ಥಾನ ಬದಲಾಗುವುದಾದರೆ ಬಿ.ಕೆ.ಹರಿಪ್ರಸಾದ್ ಅವರನ್ನು ಸಿಎಂ ಮಾಡಬೇಕು. ಈಡಿಗ ಸಮುದಾಯದ ಮುಖಂಡ ಹರಿಪ್ರಸಾದ್ ಸಿಎಂ ಹುದ್ದೆಗೆ ಅರ್ಹ. ಹರಿಪ್ರಸಾದ್ 19 ವರ್ಷಗಳ ಕಾಲ ರಾಜ್ಯಸಭಾ ಸದಸ್ಯರಾಗಿದ್ದವರು. 49 ವರ್ಷಗಳ ಕಾಲ ಪಕ್ಷ ನಿಷ್ಠೆಯಿಂದ ಕಾರ್ಯಕರ್ತನಾಗಿ ಕೆಲಸ ಮಾಡಿದವರು. ಹಾಗಾಗಿ ಹರಿಪ್ರಸಾದ್ ಗೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ.