ಬೆಂಗಳೂರು: B.ed ಕೋರ್ಸ್ ವ್ಯಾಸಂಗಕ್ಕಾಗಿ 2024 -25 ನೇ ಸಾಲಿನ ಸರ್ಕಾರಿ ಕೋಟಾ ಸೀಟುಗಳ ದಾಖಲಾತಿ ಪ್ರಕ್ರಿಯೆ ಮೊದಲ ಸುತ್ತಿನ ಸೀಟು ಹಂಚಿಕೆಯ ಫಲಿತಾಂಶವನ್ನು ಶಾಲಾ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕ ವತಿಯಿಂದ ಪ್ರಕಟಿಸಲಾಗಿದೆ.
ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಚಲನ್ ಡೌನ್ಲೋಡ್ ಮಾಡಿಕೊಂಡು ನಿಗದಿತ ದಾಖಲಾತಿ ಶುಲ್ಕವನ್ನು ಡಿ. 10 ರೊಳಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಪಾವತಿಸಬೇಕು. ಡಿಸೆಂಬರ್ 13ರೊಳಗೆ ಕಾಲೇಜಿಗೆ ದಾಖಲಾಗಬೇಕು.
ಶುಲ್ಕ ಪಾವತಿಸಿ ನಿಗದಿತ ದಿನಾಂಕದೊಳಗೆ ಸಂಬಂಧಿಸಿದ ಕಾಲೇಜುಗಳಿಗೆ ದಾಖಲಾಗದ ಅಭ್ಯರ್ಥಿಗಳು ಮುಂದಿನ ಸುತ್ತಿಗೆ ತಮ್ಮ ಅರ್ಹತೆ ಕಳೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಸೀಟು ಹಂಚಿಕೆಯಾದ ಕಾಲೇಜಿಗೆ ದಾಖಲಾತಿ ಪಡೆದುಕೊಳ್ಳಬೇಕು ಎಂದು ತಿಳಿಸಲಾಗಿದೆ. www.school education.karnataka. gov.in ವೆಬ್ಸೈಟ್ ನಲ್ಲಿ ಹೆಚ್ಚಿನ ಮಾಹಿತಿ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ.