ದಾವಣಗೆರೆ: ಕೊರೋನಾ ಕಾರಣದಿಂದಾಗಿ ಶೈಕ್ಷಣಿಕ ವರ್ಷದಲ್ಲಿ 35 ದಿನಗಳು ಕಡಿಮೆಯಾಗಿವೆ. ಇದನ್ನು ಸರಿದೂಗಿಸಲು ಶಿಕ್ಷಕರು ಒಪ್ಪಿದರೆ ಶನಿವಾರ ಪೂರ್ಣ ತರಗತಿ ನಡೆಸಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಸರಾ ರಜೆಯಲ್ಲಿ 5 ದಿನಗಳನ್ನು ಸರಿದೂಗಿಸಲಾಗಿದೆ. ಶಿಕ್ಷಕರು ಎಷ್ಟೇ ಕಷ್ಟವಾದರೂ ಪಠ್ಯ ಪೂರ್ಣಗೊಳಿಸುವುದಾಗಿ ಉತ್ಸಾಹದಿಂದ ಹೇಳಿದ್ದಾರೆ. ಸದ್ಯಕ್ಕೆ ಪಠ್ಯ ಕಡಿತ ಮಾಡುವುದಿಲ್ಲ. ಶಿಕ್ಷಕರು ಒಪ್ಪಿಕೊಂಡರೆ ಶನಿವಾರ ಪೂರ್ಣ ತರಗತಿ ನಡೆಸಲಾಗುವುದು ಎಂದು ಹೇಳಿದ್ದಾರೆ.
ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾಥಮಿಕ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಲು ತಯಾರಿ ಆರಂಭಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.