alex Certify ಅಖಿಲೇಶ್ ಯಾದವ್ ಗೆ ಮತ್ತೆ ಮುಖಭಂಗ, ‘ಡಬಲ್ ಎಂಜಿನ್’ ಬಿಜೆಪಿಗೆ ಭರ್ಜರಿ ಜಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಖಿಲೇಶ್ ಯಾದವ್ ಗೆ ಮತ್ತೆ ಮುಖಭಂಗ, ‘ಡಬಲ್ ಎಂಜಿನ್’ ಬಿಜೆಪಿಗೆ ಭರ್ಜರಿ ಜಯ

ನವದೆಹಲಿ: ಉಪ ಚುನಾವಣೆಯಲ್ಲಿ ಅಖಿಲೇಶ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷಕ್ಕೆ ಭಾರಿ ಹಿನ್ನಡೆಯಾಗಿದೆ.

ಭಾನುವಾರ ನಡೆದ ಉತ್ತರ ಪ್ರದೇಶದ ರಾಮಪುರ, ಅಜಂಗಢ ಲೋಕಸಭಾ ಉಪಚುನಾವಣೆ ಮತ ಎಣಿಕೆಯಲ್ಲಿ ಭಾರತೀಯ ಜನತಾ ಪಕ್ಷದ(ಬಿಜೆಪಿ) ಅಭ್ಯರ್ಥಿಗಳು ಜಯಗಳಿಸಿದ್ದಾರೆ.

ಎಸ್‌.ಪಿ. ಭದ್ರಕೋಟೆಯಾದ ಅಜಂಗಢದಲ್ಲಿ ಬಿಜೆಪಿ ಅಭ್ಯರ್ಥಿ ದಿನೇಶ್ ಲಾಲ್ ಯಾದವ್ ‘ನಿರಾಹುವಾ’ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಅಖಿಲೇಶ್ ಯಾದವ್ ನೇತೃತ್ವದ ಪಕ್ಷದ ಧರ್ಮೇಂದ್ರ ಯಾದವ್ ವಿರುದ್ಧ ಜಯಗಳಿಸಿದ್ದಾರೆ.

ಬಿಜೆಪಿಯ ಘನಶ್ಯಾಮ್ ಸಿಂಗ್ ಲೋಧಿ ಅವರು 42,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಮೊಹಮ್ಮದ್ ಅಸಿಂ ರಾಜಾ ಅವರನ್ನು ಸೋಲಿಸುವ ಮೂಲಕ ರಾಮ್‌ ಪುರ ಕ್ಷೇತ್ರವನ್ನು ಎಸ್‌.ಪಿ.ಯಿಂದ ವಶಪಡಿಸಿಕೊಂಡರು. ಎಸ್‌ಪಿ ನಾಯಕ ಅಜಂ ಖಾನ್ ಅವರು ರಾಜಾ ಅವರನ್ನು ಕಣಕ್ಕಿಳಿಸಿದ್ದರು.

ಐತಿಹಾಸಿಕ ಗೆಲುವು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ‘ಡಬಲ್ ಎಂಜಿನ್ ಬಿಜೆಪಿ ಸರ್ಕಾರದ’ ಜನ ಕಲ್ಯಾಣ ನೀತಿಗಳ ಫಲಿತಾಂಶವಾಗಿದೆ. ಜನ ವಿಕಾಸಕ್ಕೆ ಮತ ನೀಡಿದ್ದಾರೆ. ಈ ಗೆಲುವು ಬಿಜೆಪಿಯ ಎಲ್ಲಾ ಶ್ರಮಜೀವಿಗಳಿಗೆ ಸಮರ್ಪಿತವಾಗಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ರಾಂಪುರ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ 37,797 ಮತಗಳಿಂದ ಗೆಲುವು ಸಾಧಿಸಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹೇಳಿದ್ದಾರೆ. ಕೋಮುವಾದ, ವಿಭಜನೆ ರಾಜಕೀಯ, ಅಲ್ಪಸಂಖ್ಯಾತರ ಓಲೈಕೆ ರಾಜಕಾರಣಕ್ಕೆ ಮರಣಶಾಸನ ಬರೆಯಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ‘ವಿಕಾಸ್ ರಾಜಕೀಯ’ವನ್ನು ಜನ ಬೆಂಬಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...