ಆಜಾದಿ ಕಾ ಅಮೃತ್ ಮಹೋತ್ಸವ ಆಚರಣೆಯ ಭಾಗವಾಗಿ, ರಾಷ್ಟ್ರವ್ಯಾಪಿ ರಂಗೋಲಿ ಸ್ಪರ್ಧೆ, ದೇಶಭಕ್ತಿ ಗೀತೆ ಮತ್ತು ಲಾಲಿ ಸ್ಪರ್ಧೆ ನಡೆಯಲಿದೆ. ಕೇಂದ್ರ ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ, ಮನ್ ಕಿ ಬಾತ್‌ನಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದರು. ಅದರ ಅಂಗವಾಗಿ ಸ್ಪರ್ಧೆ ಏರ್ಪಡಿಸಲಾಗ್ತಿದೆ.
ತಾಲೂಕಿನಿಂದ ರಾಷ್ಟ್ರಮಟ್ಟದವರೆಗೆ ರಂಗೋಲಿ ಸ್ಪರ್ಧೆ ನಡೆಯಲಿದೆ. ಭಾನುವಾರ ಅಂದ್ರೆ ಅಕ್ಟೋಬರ್ 31ರಿಂದಲೇ ನೋಂದಣಿ ಶುರುವಾಗಿದೆ.
ರಂಗೋಲಿ ಸ್ಪರ್ಧೆ, ದೇಶಭಕ್ತಿ ಗೀತೆಗಳ ಸ್ಪರ್ಧೆ, ಲಾಲಿ ಸ್ಪರ್ಧೆ ನಡೆಯಲಿದೆ. ರಂಗೋಲಿ ಸ್ಪರ್ಧೆಗೆ 16-45 ವರ್ಷದೊಳಗಿನ ಭಾರತೀಯರು ಹೆಸರು ನೋಂದಾಯಿಸಬಹುದು. ಭೌತಿಕ ರಂಗೋಲಿ ವಿನ್ಯಾಸವನ್ನು ಮಾತ್ರ ಪರಿಗಣಿಸಲಾಗುವುದು. ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದ ರಂಗೋಲಿ, ಸ್ವಾತಂತ್ರ್ಯ ಹೋರಾಟಗಾರರ ಚಿತ್ರ, ಭಾರತದ ಸ್ವಾತಂತ್ರ್ಯ ಚಳವಳಿಯನ್ನು ಬಣ್ಣಗಳಿಂದ ರಚಿಸಬಹುದು.
ಸ್ಪರ್ಧೆಯನ್ನು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಮೂರು ಹಂತಗಳಲ್ಲಿ ಆಯೋಜಿಸಲಾಗುವುದು. ಮುಂದಿನ ವರ್ಷ ಏಪ್ರಿಲ್ 13ರಂದು ಬೈಸಾಖಿಯಲ್ಲಿ ರಾಷ್ಟ್ರೀಯ ಮಟ್ಟದ ಫೈನಲ್ ನಡೆಯಲಿದೆ.
ರಾಜ್ಯ ಮಟ್ಟದ ವಿಜೇತರು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ಈ ಪೈಕಿ 75 ಮಂದಿಯನ್ನು ರಾಷ್ಟ್ರಮಟ್ಟದ ವಿಜೇತರನ್ನಾಗಿ ಆಯ್ಕೆ ಮಾಡಲಾಗುವುದು. ಈ 75 ರಂಗೋಲಿಗಳನ್ನು ಬಸಂತ್ ಪಂಚಮಿಯ ದಿನದಂದು ನವದೆಹಲಿಯ ಪ್ರಮುಖ ಸ್ಥಳದಲ್ಲಿ ಪ್ರದರ್ಶಿಸಲಾಗುವುದು. ಬಹುಮಾನ ಸಹ ನೀಡಲಾಗುವುದು.
16-45 ವಯಸ್ಸಿನ ಭಾರತೀಯ ನಾಗರಿಕರು ದೇಶಭಕ್ತಿ ಗೀತೆಗೆ ಹೆಸರು ನೋಂದಾಯಿಸಬಹುದು. ಮಾತೃಭಾಷೆಯಲ್ಲಿರಬಹುದು, ರಾಷ್ಟ್ರಭಾಷೆಯಲ್ಲಿರಬಹುದು ಅಥವಾ ಇಂಗ್ಲಿಷ್‌ನಲ್ಲಿಯೂ ಬರೆಯಬಹುದು.
ಸ್ಪರ್ಧೆಯು ನಾಲ್ಕು ಹಂತಗಳಲ್ಲಿ ನಡೆಸಲಾಗುವುದು. ಸ್ಥಳೀಯ ಮಟ್ಟದಲ್ಲಿ ವಿಜೇತರಾದವರನ್ನು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಸ್ಪರ್ಧಿಸಲು ಅವಕಾಶ ನೀಡುತ್ತದೆ.
ಮುಂದಿನ ವರ್ಷ ಏಪ್ರಿಲ್ 13ರಲ್ಲಿ ಬೈಸಾಖಿಯಲ್ಲಿ ಫೈನಲ್ ನಡೆಯಲಿದೆ.
ಪ್ರತಿಯೊಬ್ಬ ಭಾರತೀಯರು ಲಾಲಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಮಾರ್ಚ್ 8ರಂದು ಅಂತರರಾಷ್ಟ್ರೀಯ ಮಹಿಳಾ ದಿನದಂದು ರಾಷ್ಟ್ರೀಯ ಮಟ್ಟದ ಫೈನಲ್ ನಡೆಯಲಿದೆ. ಭಾಗವಹಿಸುವವರು ತಮ್ಮ ಮಾತೃಭಾಷೆಯಲ್ಲಿ ದೇಶಭಕ್ತಿ, ಕವನಗಳು ಮತ್ತು ಹಾಡುಗಳಿಗೆ ಸಂಬಂಧಿಸಿದ ಲಾಲಿಗಳನ್ನು ಸಲ್ಲಿಸಬಹುದು.
ಹೆಚ್ಚಿನ ಮಾಹಿತಿ www.amritmahotsav.nic.in ನಲ್ಲಿ ಲಭ್ಯವಿದೆ. ಇದ್ರ ಮುಖಪುಟದಲ್ಲಿ ಸ್ಪರ್ಧೆಗಳು ವಿಭಾಗದ ಮೇಲೆ ಕ್ಲಿಕ್ ಮಾಡಬೇಕು. ಭಾಗವಹಿಸಲು ಬಯಸುವ ಸ್ಪರ್ಧೆಯನ್ನು ಆಯ್ಕೆಮಾಡಬೇಕು. ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಸೇರಿದಂತೆ ಇತರ ವಿವರಗಳನ್ನು ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು.