ನವದೆಹಲಿ: ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡುವ ಭಕ್ತರಿಗೆ ವಿಮಾನದಲ್ಲಿ ತೆಂಗಿನಕಾಯಿ ಒಯ್ಯಲು ವಿಮಾನಯಾನ ಭದ್ರತಾ ನಿಯಂತ್ರಕ ಸಂಸ್ಥೆ ಅನುಮತಿ ನೀಡಿದೆ.
ಅಯ್ಯಪ್ಪ ಸ್ವಾಮಿ ಭಕ್ತರು ಕ್ಯಾಬಿನ್ ಬ್ಯಾಗೇಜ್ ನಲ್ಲಿ ಇರುಮುಡಿ(ತೆಂಗಿನಕಾಯಿ, ತುಪ್ಪ) ತೆಗೆದುಕೊಂಡು ಹೋಗಬಹುದು. ತೆಂಗಿನಕಾಯಿ ದಹನಶೀಲವಾಗಿರುವುದರಿಂದ ಅದನ್ನು ವಿಮಾನದಲ್ಲಿ ತೆಗೆದುಕೊಂಡು ಹೋಗಲು ಅವಕಾಶ ನೀಡುವುದಿಲ್ಲ. ಶಬರಿಮಲೆ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಇರುಮುಡಿ ಇರುವ ಬ್ಯಾಗೇಜ್ ಪರೀಕ್ಷೆ ನಡೆಸಿದ ನಂತರ ತೆಂಗಿನಕಾಯಿ ಒಯ್ಯಲು ಅನುಮತಿ ನೀಡಲಾಗುವುದು.
ಲಕ್ಷಾಂತರ ಭಕ್ತರು ಇರುಮುಡಿಯೊಂದಿಗೆ ಯಾತ್ರೆಗೆ ತೆರಳುತ್ತಾರೆ. ಜನವರಿ 14ರ ಸಂಕ್ರಾಂತಿವರೆಗೆ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ನಿಗದಿತ ಅವಧಿಯವರೆಗೆ ಅಯ್ಯಪ್ಪ ಸ್ವಾಮಿ ಭಕ್ತರಿಗೆ ಈ ವಿಶೇಷ ವಿನಾಯಿತಿ ನೀಡಲು ನಿಯಮ ಸಡಿಲಿಕೆ ಮಾಡಲಾಗಿದೆ.