
ಲೇಖಕಿ ತಾಹಿರಾ ಕಶ್ಯಪ್ ತಮ್ಮ ಹಾಟ್ ಚಿತ್ರಗಳ ಮೂಲಕ ಇನ್‌ಸ್ಟಾಗ್ರಾಂನಲ್ಲಿ ಮಿಂಚುತ್ತಿರುತ್ತಾರೆ. ತಮ್ಮ ಪತಿ ಆಯುಷ್ಮಾನ್ ಖುರಾನಾ ಜೊತೆಗೆ ಹಾಲಿಡೇ ಮೂಡ್‌ನಲ್ಲಿರುವ ಕಶ್ಯಪ್ ಮತ್ತವರ ಮಕ್ಕಳು ಚಿತ್ರವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.
ಹಳದಿ ಬಣ್ಣದ ಬಿಕಿನಿಯಲ್ಲಿ ಮಿಂಚುತ್ತಿರುವ ಕಶ್ಯಪ್, “ಎಲ್ಲಾ ಗಾತ್ರ ಹಾಗೂ ಆಕಾರಗಳಲ್ಲಿ ನಾನು ನಾನಾಗಿಯೇ ಇದ್ದೇನೆ. ನಾನು ನನ್ನ ದೇಹ, ಮನಸ್ಸು ಹಾಗೂ ಆತ್ಮವನ್ನು ಸಂಪೂರ್ಣವಾಗಿ ಒಪ್ಪಿಕೊಂಡಿದ್ದೇನೆ. ಇಂದು ನಾನು ಹಳದಿ ಬಣ್ಣದಲ್ಲಿದ್ದು, ನೀಲಿ ಬಣ್ಣದ ಎಲ್ಲ ಶೇಡ್‌ಗಳಿಂದ ಸುತ್ತುವರೆಯಲ್ಪಟ್ಟಿದ್ದೇನೆ ಮತ್ತು ನಾನು ನನ್ನ ಮೇಲೆ ಲವ್‌ನಲ್ಲಿ ಬಿದ್ದಿದ್ದೇನೆ ಎಂದುಕೊಂಡಿದ್ದೇನೆ. ಇದು ನನ್ನ ಬೆಸ್ಟ್ ಪ್ರೊಫೈಲ್ ಚಿತ್ರ ಎನ್ನುವ ಆಯುಷ್ಮಾನ್ ಖುರಾನಾ ಈ ಚಿತ್ರ ಸೆರೆ ಹಿಡಿದಿದ್ದಾರೆ,” ಎಂದು ಕಶ್ಯಪ್ ಬರೆದಿದ್ದಾರೆ.
ಹೂಡಿಕೆ ದುಪ್ಪಟ್ಟಾಗುವ ಅವಧಿ ಲೆಕ್ಕ ಹಾಕುತ್ತಿದ್ದೀರಾ..? ಇಲ್ಲಿದೆ ರೂಲ್ 72 ರ ಕುರಿತ ಮಾಹಿತಿ
ತಮ್ಮ ನಿರ್ದೇಶನದ ಮೊದಲ ಫೀಚರ್ ಚಿತ್ರ ’ಶರ್ಮಾಜೀ ಕೇ ಬೇಟಿ’ಯಲ್ಲಿ ದಿವ್ಯಾ ದತ್ತಾರೊಂದಿಗೆ ಶೂಟಿಂಗ್ ಮಾಡುತ್ತಿದ್ದಾರೆ ಕಶ್ಯಪ್. ಆಧುನಿಕ ಯುಗದ ಮಧ್ಯಮವರ್ಗದ ಸರಾಸರಿ ಮಹಿಳೆಯನ್ನೇ ಥೀಮ್ ಆಗಿ ನಿರ್ಮಿಸುತ್ತಿರುವ ಕಾಮಿಡಿ ಕಥೆ ಇದಾಗಿದೆ.
ತಮ್ಮ ಬರವಣಿಗೆಯ ಐದನೇ ಪುಸ್ತಕ ’7 ಸಿನ್ಸ್ ಆಫ್ ಬೀಂಗ್ ಎ ಮದರ್’ ಪುಸ್ತಕದ ಬಿಡುಗಡೆಗೂ ತಾಹಿರಾ ಸಿದ್ಧತೆ ಮಾಡುತ್ತಿದ್ದಾರೆ.
