
ಸಾರ್ವಜನಿಕರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದ್ರಲ್ಲಿ ಆಯುಷ್ಮಾನ್ ಭಾರತ್ ಕಾರ್ಡ್ ಒಂದು. ಇದು ಜನರಿಗೆ ಉಚಿತ ಆರೋಗ್ಯ ಸೇವೆ ಒದಗಿಸಲಿದೆ. ಇದರಲ್ಲಿ ಪ್ರತಿಯೊಬ್ಬ ಕಾರ್ಡುದಾರರಿಗೂ 5 ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸೆ ಸೌಲಭ್ಯ ಸಿಗಲಿದೆ. ಸರ್ಕಾರದ ಈ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗ್ತಿದೆ.
ಬೇರೆಯವರ ಕಾರ್ಡ್ ಬಳಸಿ ಉಳ್ಳವರು ಲಾಭ ಪಡೆಯುತ್ತಿದ್ದಾರೆ. ಯಾವುದೇ ಅಪರಿಚಿತ ವ್ಯಕ್ತಿ ನಿಮ್ಮ ಹೆಸರಿನಲ್ಲಿ ಲಭ್ಯವಿರುವ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದರೆ, ತಕ್ಷಣವೇ ದೂರು ದಾಖಲಿಸಿ.
ವಂಚನೆಗಳಿಗೆ ಸರ್ಕಾರ ಟೋಲ್ ಫ್ರೀ ಸಂಖ್ಯೆ ನೀಡಿದೆ. ವಂಚಿತರು ಟೋಲ್ ಫ್ರೀ ಸಂಖ್ಯೆ 180018004444 ಗೆ ಕರೆ ಮಾಡುವ ಮೂಲಕ ದೂರು ನೀಡಬಹುದು. ಇದಕ್ಕೆ ಪ್ರಮಾಣಿಕೃತ ದಾಖಲೆ ನೀಡುವುದು ಮುಖ್ಯವಾಗುತ್ತದೆ.
ಆಯುಷ್ಮಾನ್ ಭಾರತ್ ಕಾರ್ಡನ್ನು ಆನ್ಲೈನ್ ಮೂಲಕ ನೀವು ಸುಲಭವಾಗಿ ಡೌನ್ಲೋಡ್ ಕೂಡ ಮಾಡಬಹುದು. ಅದಕ್ಕೆ https://pmjay.gov.in/ ಗೆ ಲಾಗಿನ್ ಆಗಬೇಕು. ಇಮೇಲ್ ಐಡಿ ಹಾಗೂ ಪಾಸ್ವರ್ಡ್ ಹಾಕಬೇಕಾಗುತ್ತದೆ. ಈಗ ಹೊಸ ಪುಟ ತೆರೆಯುತ್ತದೆ. ಆಧಾರ್ ಸಂಖ್ಯೆಯನ್ನು ನಮೂದಿಸುವ ಮೂಲಕ ಮುಂದುವರಿಯಬೇಕು. ಮುಂದಿನ ಪುಟದಲ್ಲಿ ನಿಮ್ಮ ಹೆಬ್ಬೆರಳಿನ ಗುರುತನ್ನು ಪರಿಶೀಲಿಸಬೇಕು. ನಂತ್ರ ಅನುಮೋದಿತ ಫಲಾನುಭವಿ’ ಆಯ್ಕೆಯ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಪಟ್ಟಿ ತೆರೆಯುತ್ತದೆ. ಅದರಲ್ಲಿ ಹೆಸರನ್ನು ಹುಡುಕಿ ಪ್ರಿಂಟ್ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ ಸಿಎಸ್ಸಿ ವ್ಯಾಲೆಟ್ ಕಾಣಿಸುತ್ತದೆ. ಪಾಸ್ವರ್ಡ್ ಹಾಕಬೇಕಾಗುತ್ತದೆ. ನಂತ್ರ ಪಿನ್ ನಮೂದಿಸಬೇಕಾಗುತ್ತದೆ. ಮತ್ತೆ ಮುಖಪುಟಕ್ಕೆ ಬಂದಾಗ ಡೌನ್‌ಲೋಡ್ ಕಾರ್ಡ್ ಆಯ್ಕೆಯು ಅಭ್ಯರ್ಥಿಯ ಹೆಸರು ಕಾಣಿಸುತ್ತದೆ. ಅದನ್ನು ಡೌನ್ಲೋಡ್ ಮಾಡಬೇಕು.